

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿರುವ ಇಪಿಎಫ್ ಕಚೇರಿಯಲ್ಲಿ ಶುಕ್ರವಾರ ನಿವೃತ್ತಿ ದಿನವೇ ಪಿಂಚಣಿ ಪ್ರಮಾಣ ಪತ್ರ (ಪಿಪಿಒ) ವಿತರಿಸುವ ಪ್ರಯಾಸ ಕಾರ್ಯಕ್ರಮದಲ್ಲಿ 38 ಪಿಪಿಒ ವಿತರಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಹಾಜರಾದ 25 ಜನರಿಗೆ ಪ್ರಾದೇಶಿಕ ಪಿಎಫ್ ಆಯುಕ್ತ ರಾಮಕೇಶ ಮೀನಾ ಅವರು ಪ್ರಮಾಣ ಪತ್ರ ವಿತರಣೆ ಮಾಡಿದರು.
ಅಕೌಂಟ್ಸ್ ಆಫೀಸರ್ ಮಂಜುನಾಥ ಎ. ಜಮದಂಡಿ, ಕೆ. ವೆಂಕಟೇಶ, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ, ಸಿಬ್ಬಂದಿ ಇದ್ದರು.