ಹುಬ್ಬಳ್ಳಿ: ಇಪಿಎಸ್ 1995ರ ನಿಬಂಧನೆಗಳ ಕುರಿತು ಹಾಗೂ ಪಿಂಚಣಿದಾರರ ಕುಂದುಕೊರತೆಗಳನ್ನು ಪರಿಹರಿಸಲು ಇಪಿಎಫ್ಒ ವತಿಯಿಂದ ವಿಶೇಷ ವೇದಿಕೆ ಪಿಂಚಣಿ ಅದಾಲತ್ ಫೆ. 17ರಂದು ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ.
ಆಸಕ್ತ ಪಿಂಚಣಿದಾರರು ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಸಂಬಂಧಿತ ದಾಖಲೆಗಳೊಂದಿಗೆ ಪಿಂಚಣಿ ಅದಾಲತ್ ಎಂದು ಸೂಚಿಸಿ ಇಮೇಲ್ ಮೂಲಕ ಕಳುಹಿಸಲು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರಾಮಕೇಶ ಮೀನಾ ಕೋರಿದ್ದಾರೆ.