ಹುಬ್ಬಳ್ಳಿ: ಇಲ್ಲಿಯ ನವನಗರದ ಕ್ಷೇತ್ರಿಯ ಭವಿಷ್ಯನಿಧಿ (ಇಪಿಎಫ್ಒ) ಕಾರ್ಯಾಲಯದ ವತಿಯಿಂದ ಆ. 27ರಂದು ಬೆಳಗ್ಗೆ 9.30ಕ್ಕೆ ವಿವಿಧ ಜಿಲ್ಲೆಯ ಕೇಂದ್ರಗಳಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಕಾಸನಗರದ ಮನು ಪ್ರಿಯಾ, 1ನೇ ಮುಖ್ಯ 2ನೇ ಕ್ರಾಸ್ ನಲ್ಲಿರುವ ಪೃಥ್ವಿ ಎಜ್ಯುಕೇಶನಲ್ ಟ್ರಸ್ಟ್ ನಲ್ಲಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗೋಕುಲ ರಸ್ತೆ, ವಿಮಾನ ನಿಲ್ದಾಣ ಹತ್ತಿರದ ಕಿರ್ಲೋಸ್ಕರ್ ಇಲೆಕ್ಟ್ರಿಕ್ ಕಂ. ಲಿಮಿಟೆಡ್ ನಲ್ಲಿ, ಗದಗ ಜಿಲ್ಲೆಯ ಮಲ್ಲಸಮುದ್ರ ರಾಜ್ಯ ಹೆದ್ದಾರಿಯಲ್ಲಿರುವ ಗದಗ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯಲ್ಲಿ.
ಬೆಳಗಾವಿಯ ಖಾನಾಪುರ ರಸ್ತೆ ದೇಸೂರು ಗ್ರಾಮದಲ್ಲಿರುವ ಎಂಜಿ ಆಟೋಮೋಟಿವ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾಜುಬಾಗ್ ರಸ್ತೆಯ ಹಳೇ ಸಿವಿಲ್ ಆಸ್ಪತ್ರೆ ಕಾಂಪೌಂಡ್ ನಲ್ಲಿರುವ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಂಬಂಧಿಸಿದ ಪಿಂಚಣಿದಾರರು, ಚಂದಾದಾರರು, ಉದ್ಯೋಗದಾತರು ಹಾಗೂ ಕಾರ್ಮಿಕ ಸಂಘಟನೆ ಯವರು ಇದರಲ್ಲಿ ಭಾಗವಹಿಸಬೇಕೆಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರಾಮಕೇಶ ಮೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.