

ಹುಬ್ಬಳ್ಳಿ: ಇಲ್ಲಿಯ ನವನಗರದ ಇಪಿಎಫ್ಒ ಪ್ರಾದೇಶಿಕ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ (ಭವಿಷ್ಯ ನಿಧಿ ನಿಮ್ಮ ಬಳಿಗೆ) ಕಾರ್ಯಕ್ರಮವನ್ನು ಧಾರವಾಡದ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಯೂಫ್ಲೆಕ್ಸ್ ಲಿಮಿಟೆಡ್ ನಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು.
ವಿವಿಧ ಸಂಸ್ಥೆಗಳ ಉದ್ಯೋಗಿಗಳು, ಉದ್ಯೋಗದಾತರರೊಂದಿಗೆ ಸಂವಾದ ನಡೆಸಲಾಯಿತು. ಪರಸ್ಪರ ಮಾಹಿತಿ ಹಂಚಿಕೆ ಕಾರ್ಯ ನಡೆಯಿತು. ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು.
ಪಿಎಫ್ ಕಚೇರಿಯ ಅಕೌಂಟ್ಸ್ ಆಫೀಸರ್ ಬಿ. ಣಿಸಿನ್ಹಾ, ಸೆಕ್ಶನ್ ಸೂಪರವೈಸರ್ ಕೆ. ಚನ್ನವಿರಗೌಡ, ಸೊಸಿಯಲ್ ಸೆಕ್ಯುರಿಟಿ ಅಸಿಸ್ಟಂಟ್ ಮಕ್ತುಮ್ ಹುಸೇನ್ ಜಮಾದಾರ, ಯೂಫ್ಲೆಕ್ಸ್ ಸಂಸ್ಥೆಯ ಪ್ರೊಡಕ್ಶನ್ ಹೆಡ್ ಸಿ.ಎಲ್. ಸಿಂಗ್ ನೇತೃತ್ವ ವಹಿಸಿದ್ದರು.
ಯೂಫ್ಲೆಕ್ಸ್ ಹಾಗೂ ವಿವಿಧ ಸಂಸ್ಥೆಗಳ 40ಕ್ಕೂ ಹೆಚ್ಚು ಪಿಎಫ್ ಚಂದಾದಾರರು, ಪಿಂಚಣಿದಾರರು,
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇಪಿಎಫ್ಒದಿಂದ ಇರುವ ಸೌಲಭ್ಯಗಳು ಹಾಗೂ ಅವುಗಳನ್ನು ಪಡೆದುಕೊಳ್ಳುವ ಬಗೆಯನ್ನು ಅಧಿಕಾರಿಗಳು ವಿವರಿಸಿದರು.