ಗೂಡಂಗಡಿಯಲ್ಲಿ ಚಹಾ ಕುಡಿಯಲು ಸಮಸ್ಯೆ..!

kk
Published on



ಮಂಗಳೂರು : ಹಿಂದೆ ಗೂಡಂಗಡಿಯಲ್ಲೂ ಚಹಾ ಕುಡಿಯುತ್ತಿದ್ದೆ, ಈಗ ಸಾಧ್ಯವಾಗುತ್ತಿಲ್ಲ. ಗೂಡಂಗಡಿಗೆ ಹೋದರೆ ಅವರ ವ್ಯಾಪಾರಕ್ಕೆ ತೊಂದರೆಯಾಗುತ್ತದೆ..ಹೀಗೆಂದು ಸಮಸ್ಯೆಯನ್ನು ತೆರೆದಿಟ್ಟದ್ದು ಸ್ಪೀಕರ್ ಯು.ಟಿ.ಖಾದರ್.
ಸೋಮವಾರ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಅವರು ಸ್ವಾರಸ್ಯಕರ ವಿಷಯವನ್ನು ಹಂಚಿಕೊಂಡರು.
ಹಿಂದೆ ಶಾಸಕನಾಗಿದ್ದಾಗ, ಸಚಿವನಾಗಿದ್ದಾಗ ಹೆಚ್ಚಿನ ಕಟ್ಟುಪಾಡು ಇರಲಿಲ್ಲ. ಕ್ಷೇತ್ರದಲ್ಲಿ ಸಂಚರಿಸುವಾಗ ಗೂಡಂಗಡಿಯಲ್ಲೂ ಚಹಾ ಕುಡಿಯುತ್ತಿದ್ದೆ. ಸಣ್ಣ ಹೋಟೆಲ್‌ನಲ್ಲೂ ಊಟ ಮಾಡುತ್ತಿದ್ದೆ. ಈಗ ಹಾಗೆ ಮಾಡಲು ಹೋದರೆ ಅಂಗಡಿವರಿಗೆ ಕಿರಿಕಿರಿಯಾಗುತ್ತದೆ.
ಇತ್ತೀಚೆಗೆ ಬಿ.ಸಿ.ರೋಡಿನಲ್ಲಿ ಸ್ನೇಹಿತರ ಅಂಗಡಿಗೆ ಚಹಾಕ್ಕೆ ಬರುವುದಾಗಿ ಹೇಳಿದ್ದೆ. ನನ್ನ ಸ್ಪೀಕರ್ ಹುದ್ದೆಯ ಕಾರಣಕ್ಕಾಗಿ ಪೊಲೀಸರು ಬೆಳಗ್ಗೆಯೇ ಅಲ್ಲಿಗೆ ಭದ್ರತೆ ಕಲ್ಪಿಸಿದ್ದರು. ಪೊಲೀಸರನ್ನು ಕಂಡು ಲಾರಿ ಚಾಲಕರು ಸಹಿತ ಕೆಲವು ಗ್ರಾಹಕರು ಅಂಗಡಿಯತ್ತ ಸುಳಿಯಲಿಲ್ಲ.. ಎಂದು ಖಾದರ್ ಪ್ರಸಂಗವನ್ನು ವಿವರಿಸಿದರು.
.............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net