

ವಿರಾಜಪೇಟೆ : ಗ್ರಾಮೀಣಾ ಭಾಗದಲ್ಲಿ ಉತ್ತಮ ಗ್ರಾಹಕ ಸೇವೆ ನೀಡಿದ್ದಕ್ಕಾಗಿ ಬಾಳುಗೋಡು ಶ್ರೀಮಾತಾ ಪೆಟ್ರೋಲಿಯಂಗೆ ಪ್ರಶಸ್ತಿ ಮತ್ತು ಪ್ರಶಂಸಾ ಪತ್ರ ದೊರಕಿದೆ. ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪಂಚ ರಾಜ್ಯಗಳ ಇಂಧನ ವಿತರಕರ ಸಭೆಯಲ್ಲಿ ಗ್ರಾಮೀಣ ಭಾಗದ ಉತ್ತಮ ಸೇವೆ ಪರಿಗಣಿಸಿ ಬಾಳುಗೋಡು ಬಂಕ್ ಮಾಲೀಕ ಉಲ್ಲಾಸ್ ಸಿ. ಶೇಟ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಕಂಪನಿಯ ಪಂಚ ರಾಜ್ಯಗಳ ವ್ಯವಸ್ಥಾಪಕ ಅನೂಪ್ ತನೇಜಾ ಈ ಸಂದರ್ಭ ಮಾತನಾಡಿ, ಕರ್ನಾಟಕದ ಗ್ರಾಮೀಣ ಭಾಗದ ಒಟ್ಟು 5 ವಿತರಕ ಸಂಸ್ಥೆಗಳು ವಾರ್ಷಿಕ ಸ್ಪರ್ಧೆಯಲ್ಲಿ ಉತ್ತಮ ಸೇವೆಗೆ ಪರಿಗಣಿಸಲಾಗಿದೆ ಎಂದರು.
ಕಂಪನಿಯ ದಕ್ಷಿಣ ಭಾರತ ವಲಯ ವ್ಯವಸ್ಥಾಪಕ ವಿಕ್ರಾಂತ್ ಸೇರಿದಂತೆ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯದ ವಿವಿಧ ಭಾಗದ ವಿತರಕರು ಹಾಜರಿದ್ದರು.