

ತೇರದಾಳ: ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ಎರಡನೇ ಕಾಲುವೆ ಬಳಿ ಮಂಗಳವಾರ ಸಂಜೆ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅದರೊಳಗಿದ್ದ ಪತ್ನಿ ಕೊಲೆಗೆ ಯತ್ನಿಸಲಾಗಿದೆ.
ಪತಿ ಅಲ್ಲಾಭಕ್ಷ ಮಕ್ತುಮಸಾಬ ದೆದಾರ ತನ್ನ ಅಕ್ಕನ ಮಕ್ಕಳಾದ ಹಮೀದಾಬಿ ಅಪ್ಪಾಲಾಲ ಡಾಲಾಯತ ಹಾಗೂ ಅಬ್ದುಲಅಜೀಜ ಅಪ್ಪಾಸಾಬ ಡಾಲಾಯತ ಜತೆ ಸೇರಿ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಅನಾಹುತದಲ್ಲಿ ಅಂಗಡಿಯಲ್ಲಿದ್ದ ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಕಿರಾಣಿ ಸಾಮಗ್ರಿ ಸೇರಿ ಮತ್ತಿತರ ಬೆಲೆ ಬಾಳುವ ವಸ್ತುಗಳು ಹಾನಿಗೀಡಾಗಿವೆ ಎಂದು ರುಕ್ಸಾನಾ ದಫೆದಾರ ತೇರದಾಳ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
5 ಗುಂಟೆ ಆಸ್ತಿ ವಾಜ್ಯ ನ್ಯಾಯಾಲಯದಲ್ಲಿದ್ದು, ಆ ಆಸ್ತಿಗಾಗಿ ಅಂಗಡಿಗೆ ಬೆಂಕಿ ಹಚ್ಚಿ ನನ್ನ ಕೊಲೆ ಮಾಡಲು ಪತಿ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಪತ್ನಿ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ತೇರದಾಳ ಠಾಣಾಧಿಕಾರಿ ಅಪ್ಪಣ್ಣ ಐಗಳಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಗ್ನಿಶಾಮಕ ದಳದ ಎಎ್ಎಸ್‌ಟಿಒ ಆರ್.ಟಿ. ಚಿವಟೆ, ಎ್ಡಿಗಳಾದ ಎಲ್.ವಿ. ಹಳ್ಳಿ, ಎಸ್.ವೈ. ಸಂದ್ರಿಮನಿ, ಎಲ್‌ಎ್ ಎಚ್.ಎಸ್. ಗೋಕಾಕ, ಎ್ಎಂ.ಎಂ.ಎಸ್. ಸತ್ತಿಗೌಡರ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.