ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ವಿರೋಧ ; ಎತ್ತಿನಗಾಡಿ, ಸೈಕಲ್‌ಗಳಲ್ಲಿ ಪ್ರತಿಭಟನಾ ಮೆರವಣಿಗೆ

12 c n halli congrece photo
Published on

ಚಿಕ್ಕನಾಯಕನಹಳ್ಳಿ : ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಮುಖಂಡರು ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಎತ್ತಿನಗಾಡಿ, ಸೈಕಲ್‌ಗಳ ಜತೆ ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನೆಹರು ವೃತ್ತದ ಮೂಲಕ ಬಿ.ಎಚ್.ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಬಳಿ ಜಮಾವಣೆಗೊಂಡು ತಹಸೀಲ್ದಾರ್ ತೇಜಸ್ವೀನಿಗೆ ಮುಖಂಡರು ಮನವಿ ಸಲ್ಲಿಸಿದರು.

ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ದ್ವಿಗುಣವಾಗಲು ತೈಲಬೆಲೆ ಹೆಚ್ಚಳವೇ ಕಾರಣವಾಗಿದ್ದು, ಇದಕ್ಕೆ ಬಿಜೆಪಿಯೇ ನೇರ ಹೊಣೆ. ನಾವು ವ್ಯಾಕ್ಸಿನ್ ಹಾಕಿಸಿಕೊಂಡಾಗ ಅದರ ಪ್ರಮಾಣ ಪತ್ರಕ್ಕೂ ಮೋದಿಯ ೆಟೊ ಹಾಕಲಾಗುತ್ತಿದ್ದು, ಪ್ರತಿಯೊಂದರಲ್ಲೂ ಮೋದಿಯ ೆಟೊ ಹಾಕುತ್ತಿರುವ ಕೇಂದ್ರಸರ್ಕಾರ ಮುಂದಿನ ದಿನಗಳಲ್ಲಿ ಮರಣ ದೃಢೀಕರಣ ಪತ್ರದಲ್ಲೂ ಮೋದಿ ೆಟೊ ಹಾಕುತ್ತಾರೆ ಎಂದು ಕಾಂಗ್ರೇಸ್‌ವಕ್ತಾರ ಮುರಳೀಧರ ಹಾಲಪ್ಪ ವ್ಯಂಗ್ಯವಾಡಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಮುಂದಿನ ಹತ್ತುದಿನಗಳು ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.

ಕಚ್ಚಾತೈಲ ಬೆಲೆಯು ಅತ್ಯಂತ ಕಡಿಮೆ ಇದ್ದರೂ, ಪೆಟ್ರೋಲ್, ಡಿಸೆಲ್ ಬೆಲೆಯು ನೂರರ ಗಡಿ ದಾಟಿದೆ. ಈ ಹಿಂದೆ ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾತೈಲಬೆಲೆಯು ಲೀಟರ್‌ಗೆ 120ರಿಂದ 130 ರೂಪಾಯಿ ಇದ್ದರೂ 60ರೂಪಾಯಿಗಳ ಆಸುಪಾಸಿನಲ್ಲೇ ಪೆಟ್ರೊಲ್ ಬೆಲೆ ಇತ್ತು. ಪೆಟ್ರೋಲ್ 104 ರೂ., ಡೀಸೆಲ್ 95 ರೂಪಾಯಿ, 360 ರೂಪಾಯಿ ಇದ್ದ ಅಡುಗೆ ಅನಿಲ 845 ರೂಪಾಯಿ ತಲುಪಿದೆ. ಸಾಮಾನ್ಯ ಜನ ತತ್ತರಿಸುವಂತಾಗಿದ್ದು,ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಮಾಜಿ ಶಾಸಕ ಬಿ.ಲಕ್ಕಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ, ಜಿಲ್ಲ್ಲಾ ಉಪಾಧ್ಯಕ್ಷ ಹನುಮಂತರಾಯಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಪ್ರಧಾನಕಾರ್ಯದರ್ಶಿ ಬ್ರಹ್ಮಾನಂದ್, ವಕ್ತಾರ ಕೆ.ಜಿ.ಕೃಷ್ಣೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಹುಳಿಯಾರು ಪಪಂ ಸದಸ್ಯರಾದ ಬಡಗಿರಾಜು, ಸಿದ್ದಿಕ್, ಎಸ್‌ಆರ್‌ಎಸ್ ದಯಾನಂದ್, ಕುಪ್ಪೂರು ದೇವರಾಜು, ನಿಶಾನಿಕಿರಣ್, ಕಾತ್ರಿಕೆ ಹಾಳ್‌ಗೊವಿಂದ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಪವನ್, ಲೋಕೇಶ್, ಪ್ರಸನ್ನ ಕುಮಾರ್, ಕಾರ್ಮಿಕಘಟಕದ ಅಧ್ಯಕ್ಷ ನಿಂಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಇದ್ದರು.

ಸರ್ಕಾರಗಳ ವೈಫಲ್ಯ : ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದಂತೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಹೆಚ್ಚಾಗುತ್ತಿವೆ. ಬೆಲೆ ಏರಿಕೆಯಿಂದಾಗಿ ಎಲ್ಲ ವರ್ಗದ ಜನರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯ ಎದ್ದುಕಾಣುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಟೀಕಿಸಿದರು.

ಕೇಂದ್ರಸರ್ಕಾರವು ಖಾಸಗಿ ವ್ಯಕ್ತಿಗಳ ಕೈಯಲ್ಲಿದ್ದು, ಅಂಬಾನಿ, ಅದಾನಿಯವರೊಂದಿಗೆ ಜತೆ ಸೇರಿಕೊಂಡು ಮೋದಿ, ಅಮಿತ್‌ಷಾ ದೇಶವನ್ನು ನಡೆಸುತ್ತಿದ್ದಾರೆ. ಕೂಡಲೇ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಬಿಜೆಪಿಯನ್ನು ಮನೆಗೆ ಕಳುಹಿಸಬೇಕಾಗಿದೆ. ಟಿ.ಬಿ.ಜಯಚಂದ್ರ ಮಾಜಿ ಸಚಿವ ಕೇಂದ್ರ, ರಾಜ್ಯ ಹಾಗೂ ಇಲ್ಲಿನ ಚಿಕ್ಕನಾಯಕನಹಳ್ಳಿ ಸರ್ಕಾರಗಳು ಜನವಿರೋಧಿ ಕೆಲಸಗಳನ್ನು ಮಾಡುತ್ತಿವೆ. ಇದಕ್ಕೆ ಇಲ್ಲಿನ ಸಚಿವರು ಹೊರತಾಗಿಲ್ಲ, ಇಂತಹ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ. ರಮೇಶ್‌ಬಾಬು ವಿಧಾನಪರಿಷತ್ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net