

ಬ್ರಹ್ಮಾವರ: ಬಡಗುತಿಟ್ಟಿನ ಸಂಪ್ರದಾಯಬದ್ಧ ಯಕ್ಷಗಾನ ಕಲೆ ಜತೆ ಮರಾಟಿ ಸಮುದಾಯದ ಮೇಳದ ಕಲಾವಿದರಾಗಿ ಗುರುತಿಸಿಕೊಂಡ ಪೇತ್ರಿ ಮಾಧವ ನಾಯ್ಕ ಯಕ್ಷಗಾನದ ಸವ್ಯಸಾಚಿ. ಬಡಗುತಿಟ್ಟಿನ ಯಕ್ಷಗಾನ ಕಲೆ ಮತ್ತು ಕಲಾವಿದರ ನತೆಯನ್ನು ಹೆಚ್ಚಿಸಿದವರು ಎಂದು ಯಕ್ಷಗಾನ ಗುರು ಶ್ರೀಧರ ಹೆಬ್ಬಾರ್ ಹೇಳಿದರು.
ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಪೇತ್ರಿ ಮಾಧವ ನಾಯ್ಕ ಸಂಸ್ಮರಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಂಸ್ಮರಣಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವ್ಯಾಸಿ ಯಕ್ಷಗಾನ ಕಲಾವಿದ ಗುಂಡು ನಾಯ್ಕ ಅವರಿಗೆ ಪೇತ್ರಿ ಮಾಧವ ನಾಯ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮರಾಟಿ ಸಮುದಾಯದ ಗಣ್ಯರು ಮತ್ತು ಯಕ್ಷಗಾನ ಕಲಾವಿದರಾದ ಬೆಳಂಜೆ ಮಹಾಬಲ ನಾಯ್ಕ, ವೆಂಕಟೇಶ ನಾಯ್ಕ, ಅಪ್ಪು ನಾಯ್ಕ, ಸುಂದರ್ ನಾಯ್ಕ, ಆನಂದ ನಾಯ್ಕ ಪೇತ್ರಿ, ರಾಧಾಕೃಷ್ಣ ನಾಯ್ಕ, ನಾರಾಯಣ ನಾಯ್ಕ, ಬಿ.ಟಿ.ನಾಯ್ಕ, ಆನಂದ ನಾಯ್ಕ ಉಪಸ್ಥಿತರಿದ್ದರು. ಸತೀಶ್ ಬೆಳಂಜೆ ಕಾರ್ಯಕ್ರಮ ನಿರೂಪಿಸಿದರು. ಶೇಖರ ನಾಯ್ಕ ವಂದಿಸಿದರು.