

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟುವಂತೆ ತಹಸೀಲ್ದಾರ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಕಾರ್ಯಕರ್ತರು ಮಂಗಳವಾರ ಮನವಿ ಸಲ್ಲಿಸಿದರು.
ಮೈಕ್ರೋ ಫೈನಾನ್ಸ್ ಕಂಪನಿಯವರು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಸಾಲ ಪಡೆದವರು ಮರುಪಾವತಿಸಲು ವಿಳಂಬ ಮಾಡಿದರೆ ಫೈನಾನ್ಸ್‌ನವರು ಅವರ ಮನೆಯ ಮುಂದೆಯೇ ಕುಳಿತು ಒತ್ತಾಯ, ಅವಮಾನ, ಅವ್ಯಾಚ್ಯ ಪದ ಬಳಕೆ ಮಾಡುತ್ತಿದ್ದಾರೆ. ಸಾಲ ಪಡೆದ ಅನೇಕರು ಇವರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು ಆತ್ಮಹತ್ಯೆಯ ದಾರಿ ಹಿಡಿಯುವ ಮೊದಲೇ ಸಂಬಂಧಪಟ್ಟವರು ಇವುಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಉಪತಹಸೀಲ್ದಾರ್ ಸಂತೋಷ್ ಕಿಮಾಯಿ ಸ್ವೀಕರಿಸಿದರು. ನಗರ ಘಟಕದ ಅಧ್ಯಕ್ಷ ಶ್ರೇಯಾಂಕ ಹಿರೇಮಠ, ತಾಲೂಕು ಪ್ರ.ಕಾರ್ಯದರ್ಶಿ ಅಮರೇಶ ಗಾಂಜಿ, ಚಂದ್ರು ಪಾಣಿಗಟ್ಟಿ, ಚಂದ್ರು ಬಾರ್ಕಿ, ಪ್ರಜ್ವಲ್ ಗಾಂಜಿ, ಇಶಾಖ ಬಿಜಾಪುರ, ಮಹೇಶ ಕರಮಣ್ಣವರ, ಸಂಜೀವ ದೇಸಾಯಿ, ಮಾಲತೇಶ ಗುರಿಕಾರ, ವೀರೇಶ ಹಗ್ಗರದ, ವಾಸು ಗೋಸಾವಿ, ಬಸನಗೌಡ ಮನ್ನಂಗಿ, ನಾಶಿರಖಾನ ಕಿತ್ತೂರ, ಗುರುರಾಜ ಲಾಲಿ, ಸೇರಿ ಅನೇಕ ಕಾರ್ಯಕರ್ತರಿದ್ದರು.