ಸುಂಕ ವಸೂಲಿ ರದ್ದು ಮಾಡುವಂತೆ ಮನವಿ

2 ckm 4
ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ಅವರಿಗೆ ಮನವಿ ಸಲ್ಲಿಸಿದ ಎಎಪಿ ಮುಖಂಡರು ತಾಲೂಕು ಕಚೇರಿ ಆವರಣದಲ್ಲಿ ವಾಹನಗಳ ನಿಲುಗಡೆಗೆ ಸುಂಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸೈಯದ್ ಜಮೀಲ್ ಅಹ್ಮದ್, ಹೇಮಂತ್‌ಕುಮಾರ್, ಅಂಥೋಣಿ, ರಂಗನಾಥ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕು ಕಚೇರಿ ಆವರಣದಲ್ಲಿ ವಾಹನಗಳಿಗೆ ಶುಲ್ಕ ವಿಧಿಸದಂತೆ ಹಾಗೂ ಕಚೇರಿ ಆವರಣದಲ್ಲಿ ನಂದಿನಿ ಮಳಿಗೆ ತೆರೆಯಲು ಆದೇಶವಿದೆÀಯೇ ಎಂಬ ಬಗ್ಗೆ ಸಾರ್ವಜನಿಕವಾಗಿ ಉತ್ತರಿಸಬೇಕು ಎಂದು ಒತ್ತಾಯಿಸಿ ಅಮ್ ಅದ್ಮಿ ಪಕ್ಷದ ಮುಖಂಡರು ಮಂಗಳವಾರ ತಹಸೀಲ್ದಾರ್ ಸುಮಂತ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಎಎಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಜಮೀಲ್ ಅಹ್ಮದ್, ತಾಲೂಕು ಕಚೇರಿ ಆವರಣದೊಳಗೆ ನಂದಿನಿ ಮಳಿಗೆ ತೆರೆಯಲಾಗಿದೆ. ಈ ಮಳಿಗೆ ತೆರಯಲು ರಾಜ್ಯಸರ್ಕಾರ ಅಥವಾ ಜಿಲ್ಲಾಡಳಿತ ಆದೇಶವಿದೆಯೇ, ಮಳಿಗೆ ತೆರೆದಿರುವ ವ್ಯಕ್ತಿ ಟೆಂಡರ್ ಪ್ರಕ್ರಿಯೆ, ಪ್ರಕಟಣೆ ನೀಡಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ನಂದಿನಿ ಮಳಿಗೆಯಿಂದ ರಾಜ್ಯಸರ್ಕಾರಕ್ಕೆ ಬರುತ್ತಿರುವ ಆದಾಯದ ಬಗ್ಗೆ ವಿವರ ನೀಡಬೇಕು. ಅನಧಿಕೃತವಾಗಿ ಆದೇಶ ರಹಿತವಾಗಿ ಮಳಿಗೆ ಸ್ಥಾಪಿಸಿದ್ದರೆ ಕೂಡಲೇ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ತಾಲೂಕು ಕಚೇರಿ ಆವರಣದೊಳಗೆ ವಾಹನಗಳಿಗೆ ನಿಲುಗಡೆಗೊಳಿಸಲು ಮೂರು ವರ್ಷಗಳ ಹಿಂದೆ ಸುಂಕ ವಸೂಲಿ ನಡೆಯುತ್ತಿರುವುದನ್ನು ಎಎಪಿ ಖಂಡಿಸಿತ್ತು. ಇದೀಗ ಮತ್ತೆ ಸುಂಕ ವಸೂಲಿ ಆರಂಭ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನಾನುಕೂಲವಾಗಿದ್ದು ಕೂಡಲೇ ಸುಂಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಎಪಿ ರಾಜ್ಯ ಕಾಫಿ ಬೆಳೆಗಾರ ಘಟಕದ ರಾಜ್ಯಾಧ್ಯಕ್ಷ ಹೇಮಂತ್‌ಕುಮಾರ್, ಕಾರ್ಯದರ್ಶಿ ಅಂಥೋಣಿ, ಸಂಘಟನಾ ಕಾರ್ಯದರ್ಶಿ ರಂಗನಾಥ್, ಮುಖಂಡ ಸಿ.ಪ್ರಭು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net