ಗೋರ ಸೇವಾದಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆ

28
Published on

ಮೈಸೂರು: ವೈಜ್ಞಾನಿಕ ಅಧ್ಯಯನ ಇಲ್ಲದೆ ರಾಜ್ಯ ಸರ್ಕಾರ ಒಳ ಮೀಸಲು ಜಾರಿಗೊಳಿಸಬಾರದು ಎಂದು ಗೋರ ಸೇವಾದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಒಳ ಮೀಸಲು ಜಾರಿಗೊಳಿಸಲು ಮುಂದಾಗಿದೆ. ಆದರೆ, ಸರಿಯಾದ ವೈಜ್ಞಾನಿಕ ವರ್ಗೀಕರಣ ಆಗದೆ ಇರುವುದರಿಂದ ಒಳ ಮೀಸಲಾತಿ ಬಂಜಾರ ಸಮುದಾಯಕ್ಕೆ ಮಾರಕವಾಗಲಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನಲ್ಲಿ ಧರಣಿ ನಡೆಸಲಾಗಿದ್ದು, ಎರಡನೇ ಹಂತದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಯಾವುದೇ ಜನಾಂಗಕ್ಕೆ ಅನ್ಯಾಯವಾಗದಂತೆ ಒಳ ಮೀಸಲಾತಿಯನ್ನು ವೈಜ್ಞಾನಿಕ ಅಧ್ಯಯನ ಮೂಲಕ ಜಾರಿಗೊಳಿಸಬೇಕು ಎಂದು ಹೇಳಿದರು.

ಗೋರ್ ಸೀಕವಾಡಿ ಜಿಲ್ಲಾ ಸಂಯೋಜಕ ಚಂದ್ರಪ್ರಕಾಶ್ ಮೇಘಾವತ್, ಸಹ ಸಂಯೋಜಕ ರಾಜೇಶ್ ನಾಯ್ಕ, ಗೋರ್ ಸೇನಾ ಜಿಲ್ಲಾಧ್ಯಕ್ಷ ನಂದ ನಾಯ್ಕ, ಕಾರ್ಯದರ್ಶಿ ಆನಂದ ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net