ಬಂಟಕಲ್ಲು ದೇವಳದಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆ

bantakal
Published on

ಶಿರ್ವ: ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಮೀಪ ಹವಾನಿಯಂತ್ರಿತ ಸಭಾಭವನ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದೆ. ಸಮಾಜದ ದಾನಿಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಸಭಾಭವನ ನಿರ್ಮಾಣ ಸಮಿತಿ ವತಿಯಿಂದ ಸಿದ್ಧಗೊಳಿಸಿದ ವಿಜ್ಞಾಪನಾ ಪತ್ರವನ್ನು ಮಂಗಳವಾರ ದೇವಳದಲ್ಲಿ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಬೆಲ್ಪತ್ರೆ ವಿಶ್ವನಾಥ ನಾಯಕ್ ಬಿಡುಗಡೆಗೊಳಿಸಿದರು.

ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ವೈ.ಉಪೇಂದ್ರ ಪ್ರಭು ಮಾಣ್ಯೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್, ಸಮಿತಿ ಕಾರ್ಯಾಧ್ಯಕ್ಷ, ಸಭಾಭವನದ ಇಂಜಿನಿಯರ್ ಪಳ್ಳಿ ಧರ್ಮೆಟ್ಟು ಗೋಪಿನಾಥ್ ನಾಯಕ್, ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಮಾಜಿ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ರಾಜಾಪುರ ಸಾರಸ್ವತ ಸೇವಾ ವೃಂದ ಅಧ್ಯಕ್ಷ ಕೆ.ಆರ್.ಪಾಟ್ಕರ್, ಕಾರ್ಯಕಾರಿ ಸಮಿತಿ ಸದಸ್ಯ ಬಿ.ಪುಂಡಲೀಕ ಮರಾಠೆ, ಮಾಜಿ ಆಡಳಿತ ಮೊಕ್ತೇಸರ ಸರಳೇಬೆಟ್ಟು ರಮಾನಾಥ ನಾಯಕ್, ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು.ಪಾಲಮೆ, ಉಪಾಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್ ಪರ್ಕಳ, ಕೋಶಾಧಿಕಾರಿ ವಿಟ್ಠಲ ಮಡ್ಕೇಕರ್ ಸಗ್ರಿ ನೋಳೆ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮದಾಸ್ ಪ್ರಭು ಸ್ವಾಗತಿಸಿದರು. ಕ್ಷೇತ್ರದ ವೈದಿಕ ಮಂಜುನಾಥ್ ಭಟ್ ಪ್ರಾರ್ಥಿಸಿದರು. ಪೆರ್ಣಂಕಿಲ ಉಮೇಶ ನಾಯಕ್ ನಿರೂಪಿಸಿದರು. ಜತೆ ಕಾರ್ಯದರ್ಶಿ ರಾಮರಾಯ ಪಾಟ್ಕರ್ ವಂದಿಸಿದರು. ವಿಶ್ವನಾಥ್ ಬಾಂದೇಲ್ಕರ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net