ತಡೆಗೋಡೆ ನಿರ್ಮಾಣಕ್ಕೆ ಮನವಿ ಸಲ್ಲಿಕೆ

15 Spt 02
ಸೋಮವಾರಪೇಟೆ ಸಮೀಪದ ಕಕ್ಕೆಹೊಳೆ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡುವಂತೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಶಾಸಕ ಮಂತರ್‌ಗೌಡ ಪರಿಶೀಲನೆ ನಡೆಸಿದರು. ಮುಕುಂದ, ಸುಕುಮಾರ್, ಸುಬ್ರಮಣಿ ಇದ್ದರು.
Published on

 ಸೋಮವಾರಪೇಟೆ: ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಕ್ಕೆಹೊಳೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಮಂಗಳವಾರ ಶಾಸಕ ಮಂತರ್‌ಗೌಡ ಅವರಿಗೆ ಮನವಿ ಸಲ್ಲಿಸಿದರು.

ಮಳೆಗಾಲದಲ್ಲಿ ಹೊಳೆಯ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಹಾನಿ ಸಂಭವಿಸುತ್ತದೆ. ಪ್ರತಿ ಮಳೆಗಾಲದಲ್ಲೂ ಮನೆಗಳಿಗೆ ಹೊಳೆಯ ನೀರು ನುಗ್ಗುತ್ತಿದೆ ಎಂದು ತಡೆಗೋಡೆಯ ಅಗತ್ಯತೆಯ ಬಗ್ಗೆ ಶಾಸಕರ ಗಮನ ಸೆಳೆದರು.

ಕಕ್ಕೆಹೊಳೆಯು ಹರಿಯುವ ಪ್ರದೇಶದ ಅಕ್ಕಪಕ್ಕ ವಾಸದ ಮನೆಗಳು ಇರುವ ಸ್ಥಳದಲ್ಲಿ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಕ್ಷಣ ಕ್ರಿಯಾಯೋಜನೆ ತಯಾರಿಸುವಂತೆ ಸಣ್ಣ ನೀರಾವರಿ ಇಲಾಖಾ ಅಭಿಯಂತರ ಕುಮಾರಸ್ವಾಮಿ ಅವರಿಗೆ ಶಾಸಕರು ಸೂಚಿಸಿದರು.

ಈ ಸಂದರ್ಭ ಏಕದಂತ ಸೇವಾ ಸಮಿತಿ ಅಧ್ಯಕ್ಷ ಮುಕುಂದ, ಸ್ಥಳೀಯರಾದ ಸುಕುಮಾರ್, ಸುಬ್ರಮಣಿ, ಕಾರ್ಯಪ್ಪ, ಪ್ರಮುಖರಾದ ಕೆ.ಎಂ.ಲೋಕೇಶ್, ಗ್ರಾ.ಪಂ. ಸದಸ್ಯ ಚೇತನ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net