

ನರಗುಂದ: ಆನ್‌ಲೈನ್ ಬೆಟ್ಟಿಂಗ್ ಹಾಗೂ ಗೇಮ್‌ಗಳನ್ನು ನಿಷೇಧಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಸದಸ್ಯರು ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಆನೆಲೈನ್ ಬೆಟ್ಟಿಂಗ್ ಗೇಮ್‌ನಿಂದ ಯುವಕರು ಸಂಪೂರ್ಣ ಹಾದಿ ತಪ್ಪುವಂತಾಗಿದೆ. ಪಾಲಕರು ಇದರಿಂದ ಹೈರಾಣಾಗಿದ್ದಾರೆ. ಪಾಲಕರಿಗೆ ಗೊತ್ತಿಲ್ಲದಂತೆ ಅನೇಕ ಯುವಕರು ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳ ದಾಸರಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಮೋಸದ ಖಿನ್ನತೆಯಿಂದ ಅನೇಕರು ಸಾವಿಗೀಡಾದ ಘಟಣೆಗಳು ನಡೆದಿವೆ. ಅಮಾಯಕರ ಜೀವಕ್ಕೆ ಮುಳುವಾಗುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮ್‌ಗಳನ್ನು ಸರ್ಕಾರ ನಿಷೇಧಿಸಲು ಸೂಕ್ತ ಆದೇಶ ಹೊರಡಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ನಮ್ಮ ಕರ್ನಾಟಕ ಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ, ತಾಲೂಕು ಅಧ್ಯಕ್ಷ ಈರಪ್ಪ ಮ್ಯಾಗೇರಿ, ಗಜೇಂದ್ರಗಡ ತಾಲೂಕಾಧ್ಯಕ್ಷ ಕಳಕಪ್ಪ ಜಿಲಜೇರಿ, ರವಿ ಚಿಂತಾಲ, ಉಪಾಧ್ಯಕ್ಷ ಶರಣಪ್ಪ ವಾಲ್ಮೀಕಿ, ಮಕ್ತುಮಸಾಬ ನಾಯ್ಕರ್, ಮಾಬುಸಾಬ ಶಿರೋಳ, ಇರಫಾನ್ ಮುನವಳ್ಳಿ, ದಾವಲಸಾಬ ಸಾವಟಗಿ, ಅಬ್ದುಲ್ ಇಂಚಲ್, ಇಸ್ಮಾಯಿಲ್ ಧಫೇದಾರ, ರಫೀಕ ಶಲವಡಿ, ಯುಸೂಫ್ ಸೋಲಾಪೂರ, ಯಶವಂತ ನಡುವಿನಮನಿ, ಅರ್ಜುನ ಮೀನಪ್ಪನವರ, ಅಣ್ಣಪ್ಪ ಅರಕಾರಿ, ಅಖೀಲ್ ಜಮಾದಾರ, ಎಂ.ಎಂ.ಜಾವೂರ ಉಪಸ್ಥಿತರಿದ್ದರು.