

ಸಿಂಧನೂರು: ವಕೀಲರಿಗೆ ಸುಸಜ್ಜಿತವಾದ ಭವನ ನಿರ್ಮಿಸಲು ಆಗ್ರಹಿಸಿ ನ್ಯಾಯವಾದಿಗಳ ತಾಲೂಕು ಸಂಘ ನಗರದಲ್ಲಿ ಸಂಸದ ಸಂಗಣ್ಣ ಕರಡಿಗೆ ಬುಧವಾರ ಮನವಿ ಸಲ್ಲಿಸಿತು.
ತಾಲೂಕ ಸಂಘದಲ್ಲಿ ಸುಮಾರು 450 ವಕೀಲರಿದ್ದಾರೆ. ಈ ಪೈಕಿ ಬಹಳಷ್ಟು ವಕೀಲರು ಆರ್ಥಿಕವಾಗಿ ಬಡವರಿದ್ದು, ಸ್ವಂತ ಕಚೇರಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ವಕೀಲರ ಭವನ ನಿರ್ಮಿಸಬೇಕು. ಜತೆಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪ್ರವಾಸಿ ಮಂದಿರದ ಸ್ಥಳದಲ್ಲಿ ನ್ಯಾಯಾಲಯ ಕಟ್ಟಡಗಳ ನಿರ್ಮಾಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಸದ ಕರಡಿ ಸಂಗಣ್ಣ ಮಾತನಾಡಿ, ನಗರದ ತಾಲೂಕ ನ್ಯಾಯವಾದಿಗಳ ಸಂಘಕ್ಕೆ ಐದು ಲಕ್ಷ ರೂ. ಅನುದಾನವನ್ನು ನೀಡಲಾಗುವುದು. ವಕೀಲರ ಸಮಸ್ಯೆಗಳ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಕೆ.ಭೀಮನಗೌಡ, ಕಾರ್ಯದರ್ಶಿ ವೀರೇಶ ಚಿಂಚರಕಿ, ಖಜಾಂಚಿ ವೀರಭದ್ರಗೌಡ ಸಾಲಗುಂದಾ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಹಿರಿಯ ನ್ಯಾಯವಾದಿಗಳಾದ ಹೆಚ್.ರಾಮನಗೌಡ, ಎಂ.ಅಮರೇಗೌಡ, ಜಿ.ಆರ್.ಕೆ.ರೆಡ್ಡಿ, ಎಂ.ರಾಮನಗೌಡ, ಜಡಿಯಪ್ಪ, ಪ್ರಹ್ಲಾದ ಗುಡಿ, ಕಾರ್ಯದರ್ಶಿ ವೀರೇಶ ಚಿಂಚರಕಿ, ವೀರಭದ್ರಗೌಡ ಕೊಂಚಗೇರಿ, ಶೇಖರಪ್ಪ ದುಮತಿ, ಹೇಮಲತಾ, ಹೀನಾ ಅಮ್ರಿನ್ ಇತರರಿದ್ದರು.