ವಿಮಾನದಲ್ಲಿ ಮುದ್ದಿನ ನಾಯಿಯ ಗದ್ದಲ

Flight
Published on

ಪಣಜಿ: ದೆಹಲಿಯಿಂದ ಗೋವಾಕ್ಕೆ ಆಗಮಿಸುತ್ತಿದ್ದ ವಿಮಾನದಲ್ಲಿ ನಾಯಿಯ ಗದ್ದಲದಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.

ದೆಹಲಿಯ ನಿವಾಸಿ ಅಲಿಶಾ ಅಧಾನ್ ಎಂಬುವವರು ಗೋವಾಗೆ ಪ್ರಯಾಣಿಸುತ್ತಿದ್ದಳು. ಮಹಿಳೆ ತನ್ನ ಮುದ್ದಿನ ನಾಯಿಯನ್ನು ಕರೆತಂದಿದ್ದಳು. ನಾಯಿಯನ್ನು ಪಂಜರದಲ್ಲಿ ಬಂಧಿಸಲಾಗಿತ್ತು. ಆದರೆ, ಅದು ವಿಚಿತ್ರವಾಗಿ ಬೊಗಳಲು ಆರಂಭಿಸಿದ ಕಾರಣ ಮಹಿಳೆ ತನ್ನ ಜತೆಗೆ ಕರೆ ತಂದಿದ್ದಳು. ಆದರೆ, ವಿಮಾನ ಹತ್ತಿದ ನಂತರ ನಾಯಿ ಮತ್ತೆ ಬೊಗಳಲು ಪ್ರಾರಂಭಿಸಿತು. ಅಲ್ಲದೆ, ಮಹಿಳೆ ಕೈಯಿಂದ ತಪ್ಪಿಸಿಕೊಂಡು ಬೊಗಳುತ್ತ ವಿಮಾನದಲ್ಲೆಲ್ಲ ಓಡಾಡತೊಡಗಿತು. ಇದರಿಂದ ಪ್ರಯಾಣಿಕರು ಗಾಬರಿಗೊಂಡರು. ನಾಯಿಯನ್ನು ವಿಮಾನದಲ್ಲಿ ಕರೆತರುವುದನ್ನು ಹಲವು ಮಹಿಳೆಯರು ವಿರೋಧಿಸಿದ್ದಾರೆ. ವಿಮಾನ ಸಿಬ್ಬಂದಿ ಹೇಗೋ ಪರಿಸ್ಥಿತಿ ನಿಭಾಯಿಸಿದರು.

ಗೋವಾಕ್ಕೆ ಬಂದ ನಂತರ, ಮಹಿಳೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. 30 ವರ್ಷದ ಮಹಿಳೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಗೋವಾ ಮೋಪಾ ವಿಮಾನ ನಿಲ್ದಾಣ ಪೊಲೀಸರು ಈ ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ವಿಚಾರಣೆಗಾಗಿ ಠಾಣೆಗೆ ಕರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net