

ತೂಬಗೆರೆ: ಲಕ್ಷ್ಮೀದೇವಿಪುರದಲ್ಲಿ ಕಾಯಿ ಬಿಡುವ ಹಂತದಲ್ಲಿದ್ದ ಹುರಳಿಕಾಯಿ ಬೆಳೆಗೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿ ಹಾಳು ಮಾಡಿದ್ದಾರೆ.
ಲಕ್ಷ್ಮೀದೇವಿಪುರದ ರಾಮಾಂಜಿನಪ್ಪ ಅರ್ಧ ಎಕರೆಯಲ್ಲಿ ಬೀನ್ಸ್ ಬಿತ್ತನೆ ಮಾಡಿದ್ದರು. ಗಿಡ ಬೆಳೆದು ಹೂವು ಬಿಟ್ಟು ಕಾಯಿ ಬರುವ ಹಂತ ತಲುಪಿತ್ತು. ಆದರೆ, ರಾತ್ರಿ ವೇಳೆ ಬೆಳೆ ನಾಶಪಡಿಸಿದ್ದಾರೆ ಎಂದು ರಾಮಾಂಜಿನಪ್ಪ ಅಲವತ್ತುಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.