

ಮಂಡ್ಯ: ಕೋವಿಡ್ ದಿನಗಳಲ್ಲಿನ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಅಭ್ಯಾಸಮಾಡಿ ಉತ್ತಮ ಶ್ರೇಣಿಯಲ್ಲಿ ಅಂಕಪಡೆದು ಉತೀರ್ಣರಾಗಿರುವುದು ಶ್ಲಾಘನೀಯ ಎಂದು ಪಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಮಹಾದೇವ ಹೇಳಿದರು.
ನಗರದ ಪಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ೨ ವರ್ಷ ಕೋವಿಡ್ ಸಮಯವಾಗಿತ್ತು, ಕಾಲೇಜು ತರಗತಿ ಇಲ್ಲದಿದ್ದರೂ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪಾಠಕೇಳಿ ಉತ್ತಮ ಅಂಕಪಡೆದು ಕಾಲೇಜಿ ಕೀರ್ತಿತಂದಿದ್ದಾರೆ. ಪಿಇಎಸ್ ಸಂಸ್ಥೆ ಸ್ಥಾಪಕ ಕೆ.ವಿ.ಶಂಕರಗೌಡ ಮತ್ತು ಮಾಜಿ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ ಅವರ ಕನಸು, ಗ್ರಾಮೀಣ ಮನೆಗಳಲ್ಲಿ ಇಂಜನಿಯರ್, ವೈದ್ಯರು, ಉನ್ನತಮಟ್ಟದ ಅಧಿಕಾರಿಗಳು ಇರಬೇಕು ಎನ್ನುವ ಆಶಯ ಈಡೇರಬೇಕಿದೆ ಎಂದರು.
ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ, ಟ್ರಸ್ಟಿ ಮುದ್ದೇಗೌಡ, ಪ್ರಾಧ್ಯಾಪಕರಾದ ಡಾ.ನರಸಿಂಹ, ಪ್ರೊ.ಶಿವಕುಮಾರ್, ಪ್ರೊ.ಮರಿಯಯ್ಯ, ಪ್ರೊ.ಡೇವಿಡ್ ಇತರರಿದ್ದರು.