

ಮಂಡ್ಯ: ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್(ಐಎಸ್‌ಟಿಇ) 2021ನೇ ಸಾಲಿನ ಅತ್ಯುತ್ತಮ ಅಧ್ಯಾಪಕ ಅಧ್ಯಾಯ ಪ್ರಶಸ್ತಿಗೆ ಕರ್ನಾಟಕ ವಿಭಾಗದಿಂದ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಆಯ್ಕೆಯಾಗಿದೆ.
ಕರ್ನಾಟಕ ವಿಭಾಗದ ಅಧ್ಯಾಯಗಳಲ್ಲಿನ ಒಟ್ಟಾರೆ ನಾಯಕತ್ವ ಮತ್ತು ಚಟುವಟಿಕೆಗಳ ಪ್ರಮಾಣದ ಆಧಾರದ ಮೇಲೆ ಪ್ರಶಸ್ತಿ ನೀಡಲಾಗಿದೆ. ಒಟ್ಟಾರೆಯಾಗಿ 1414 ಐಎಸ್‌ಟಿಇ ಅಧ್ಯಾಪಕ ಅಧ್ಯಾಯಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ಧು, ಅವುಗಳಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಸೇರಿದಂತೆ 6 ಅಧ್ಯಾಪಕರ ಅಧ್ಯಾಯಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ಗೋವಾದಲ್ಲಿ ಆ.27ರಂದು ಆಯೋಜಿಸಿದ್ದ 51ನೇ ರಾಷ್ಟ್ರೀಯ ಐಎಸ್‌ಟಿಇ ಅಧ್ಯಾಪಕ ಅಧ್ಯಾಯಗಳ ಸಮಾವೇಶದಲ್ಲಿ ಪಿಇಎಸ್ ಕಾಲೇಜಿನ ಡಾ.ಬಿ.ಎಸ್.ಶಿವಕುಮಾರ, ಡಾ.ಎಂ.ಎನ್.ವೀಣಾ, ಸೌಮ್ಯಶ್ರೀ, ಎಂ.ಆರ್.ಸುರೇಶ್ ಪ್ರಶಸ್ತಿ ಸ್ವೀಕರಿಸಿದರು. ಅಂತೆಯೇ ತಂಡವನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಮತ್ತು ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ಅಭಿನಂದಿಸಿದ್ದಾರೆ.