ಹ್ಯಾಕಥಾನ್‌ನಲ್ಲಿ ಪಿಇಎಸ್ ಕಾಲೇಜು ಫಸ್ಟ್: ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ ಬಹುಮಾನ

WhatsApp Image 2022-08-29 at 11.49.56 AM (1)
Published on

ಮಂಡ್ಯ: ಕೇಂದ್ರ ಸರ್ಕಾರದಿಂದ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-22 ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮಂಡ್ಯ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನದೊಂದಿಗೆ 1 ಲಕ್ಷ ರೂ ಬಹುಮಾನ ಪಡೆದುಕೊಂಡಿದೆ ಎಂದು ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ತಿಳಿಸಿದರು.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಾಲೇಜಿನಿಂದ 10 ತಂಡದಿಂದ ಅರ್ಜಿ ಕಳುಹಿಸಲಾಗಿತ್ತು. ಇದರಲ್ಲಿ 3 ತಂಡ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಈ ಪೈಕಿ ಬೆಂಗಳೂರಿನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಮ್ಮ ಕಾಲೇಜಿನ ಒಂದು ತಂಡ ಹಿರಿಯ ಸಾಫ್ಟ್‌ವೇರ್ ಆವೃತ್ತಿಯಲ್ಲಿ ಬಹುಮಾನ ಪಡೆದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ 75 ಪ್ರತ್ಯೇಕ ಸ್ಥಳಗಳಲ್ಲಿ ಸ್ಪರ್ಧೆ ನಡೆಸಲಾಗಿದೆ. ಕಾಲೇಜಿನ ಇನ್ನೆರೆಡು ತಂಡಗಳು ಜೈಪುರ ಮತ್ತು ಪುಣೆಯಲ್ಲಿ ನಡೆದ ಸ್ಪರ್ದೆಯಲ್ಲಿ ಭಾಗವಹಿಸಿದ್ದು, ಅವುಗಳ ಫಲಿತಾಂಶ ಇನ್ನೂ ಬಂದಿಲ್ಲ. ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅಕ್ಷಯ್‌ಕುಮಾರ್ ಗೌತಮ್, ಜ್ಯೋತಿರಾಮ್, ಎಸ್.ಕೆ.ಸಯಂತನಿ, ಹರ್ಷಿತ್ ರಾಜ್‌ಕುಮಾರ್, ಅನಿಮೇಶ್ ಘೋಷ್ ತಂಡ ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ(ಡಿಆರ್‌ಡಿಒ) ಸಮಸ್ಯೆಯ ಅತ್ಯುನ್ನತ ಪರಿಹಾರ ತಂತ್ರಜ್ಞಾನದ ಮಾದರಿಯನ್ನು ನೀಡಿತ್ತು. ಅದಕ್ಕೆ ಬಹುಮಾನ ಬಂದಿದೆ ಎಂದು ವಿವರಿಸಿದರು.
ಕಾಲೇಜಿನ ತರಬೇತಿ ಮತ್ತು ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥ ಡಾ.ಎಸ್.ವಿನಯ್, ಸಂಯೋಜಕರಾದ ಎನ್.ಎಂ.ಸಿದ್ದೇಶ್‌ಕುಮಾರ್, ರಮೇಶ್ ಕುರುಬೆಟ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net