ಸಮಾಜದಲ್ಲಿ ಹೆಚ್ಚುತ್ತಿದೆ ವಿಕೃತಿ-ಅಸಭ್ಯತೆ

4 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಂದು ಸಮಾಜದಲ್ಲಿ ವಿಕೃತಿ ಮತ್ತು ಅಸಭ್ಯತೆ ಹೆಚ್ಚಾಗುತ್ತಿದೆ. ಎಲ್ಲ ರಂಗಗಳೂ ಸಭ್ಯತೆ ಗೆರೆ ದಾಟುತ್ತಿರುವುದು ವಿಷಾದದ ಸಂಗತಿ ಎಂದು ಹಿರಿಯ ನ್ಯಾಯವಾದಿ ಪ್ರಕಾಶ ಉಡಿಕೇರಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಲೀಲಾತಾಯಿ ಹಾಗೂ ಜೀವಣ್ಣಗೌಡ ಪಾಟೀಲ ಕುಲಕರ್ಣಿ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚುತ್ತಿರುವ ವಿಕೃತಿ ಮತ್ತು ಅಸಭ್ಯತೆ ಕುರಿತು ಮಾತನಾಡಿದರು.

ಇಂದು ನಮ್ಮ ಮಕ್ಕಳ ಕಲಿಕೆಯಲ್ಲಿ ನೈತಿಕತೆ ಕಟ್ಟಿಕೊಡುವ ಶಿಕ್ಷಣ ನೀಡುತ್ತಿಲ್ಲ. ಅಂದು ನೈತಿಕ ಶಿಕ್ಷಣಕ್ಕಾಗಿ ತರಗತಿಗಳು ಇರುತ್ತಿದ್ದವು. ಭಾವೈಕ್ಯತೆ ಮಕ್ಕಳಲ್ಲಿ ಮೂಡಿಸುವ ಹಾಡುಗಳು, ಕವಿತೆಗಳು, ಚಟುವಟಿಕೆಗಳು ಇರುತ್ತಿದ್ದವು. ಹೀಗಾಗಿ ನಮ್ಮ ಸಮಾನ ವಯಸ್ಕರಲ್ಲಿ ಸಭ್ಯತೆಯ ಸಂಸ್ಕಾರ ಕಾಣುತ್ತೇವೆ. ಇಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಇರದೆ ಹೋಗಿದ್ದರಿಂದ ಅಸಭ್ಯತೆ ಹೆಚ್ಚುತ್ತಿದೆ. ಶಿಕ್ಷಣದಲ್ಲಿ ಬದಲಾವಣೆ ತರಬೇಕಿದೆ. ನೈತಿಕತೆ ಬಿಂಬಿಸುವ ಹಾಗೆ ಪಠ್ಯಗಳು ಅಳವಡಿಸಿದಾಗಲೇ ಮಿತಿ ಮೀರಿದ ಅಸಭ್ಯತೆಗೆ ಕಡಿವಾಣ ಹಾಕಲು ಸಾಧ್ಯ ಎಂದರು.

ಪ್ರಾಧ್ಯಾಪಕಿ ರತ್ನಾ ಐರಸಂಗ ಮಾತನಾಡಿ, ಪರಿಸರದೊಂದಿಗೆ ಮನುಷ್ಯ ಅಮಾನುಷವಾಗಿ ನಡೆದುಕೊಳ್ಳುತ್ತಿದ್ದಾನೆ. ವಿಕೃತಿಯನ್ನು ಸಮಾಜದಿಂದ ಕಿತ್ತೊಗೆಯಬೇಕಾದರೆ ತಂದೆ-ತಾಯಿ ಪಾತ್ರ ಮುಖ್ಯವಾಗುತ್ತದೆ. ಅದರಲ್ಲೂ ತಾಯಿ ನೀಡುವ ಸಂಸ್ಕಾರ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದರು.

ದತ್ತಿದಾನಿ ಸರೋಜಾ ಕುಲಕರ್ಣಿ ಮಾತನಾಡಿದರು. ಕೆ.ಬಿ. ಪಾಟೀಲಕುಲಕರ್ಣಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಬಿ.ಎಸ್​. ಶಿರೋಳ, ಕೆ.ಜಿ. ದೇವರಮನಿ, ಪ್ರಭಾಕರ ಲಗಮಣ್ಣವರ, ಬಿ.ಕೆ. ಹೊಂಗಲ್​, ಶಶಿಧರ ಉಜ್ಜಿನಿ, ಡಾ. ವಿಶ್ವನಾಥ ಚಿಂತಾಮಣಿ, ಇತರರು ಇದ್ದರು.

ಶಂಕರ ಹಲಗತ್ತಿ ಸ್ವಾಗತಿಸಿದರು. ಮನೋಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net