

ವಿಟ್ಲ: ಪೆರುವಾಯಿ ಗ್ರಾಮ ಪಂಚಾಯಿತಿ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ನೀಡಿದ ವರದಿಯ ಪ್ರತಿಯಲ್ಲಿ ಖರ್ಚಿನ ವಿವರ ಕೈಬಿಡಲಾಗಿದ್ದು, ಪಂಚಾಯಿತಿ ಲೆಡ್ಜರ್ ಬುಕ್‌ನಲ್ಲಿ ಎಲ್ಲ ವಿಚಾರಗಳಿವೆ. ಈ ಮೂಲಕ ಅವ್ಯವಹಾರ ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯಿತಿಯ ಅಽಕೃತ ದಾಖಲೆಯಲ್ಲಿ ಕೆಲಸ ನಿರ್ವಹಿಸಲಾಗಿದೆ ಎಂದು ಹೇಳಿಕೊಂಡು ಬಿಲ್ ಮಾಡಿರುವುದನ್ನು ತೋರಿಸಲಾಗಿದೆ. ಆದರೆ ಸಭೆಗೆ ನೀಡಿದ ವರದಿಯಲ್ಲಿ ಒಟ್ಟು ೪೨ ಕ್ರಮ ಸಂಖ್ಯೆಯನ್ನು ನೀಡಲಾಗಿದೆಯಾದರೂ ಅವುಗಳ ಮಧ್ಯೆ ಕೆಲವು ಸಂಖ್ಯೆ ಇಲ್ಲದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಕೆಲಸವನ್ನು ಮಾಡದೆ ಪಂಚಾಯಿತಿಯಿಂದ ಹಣ ಬಿಡುಗಡೆ ಮಾಡಿರುವುದನ್ನು ಬಹಿರಂಗ ಪಡಿಸಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದರು.
ಗ್ರಾಮಸಭೆಯಲ್ಲಿ ನೀಡಲಾದ ವರದಿಗೆ ಅಭಿವೃದ್ಧಿ ಅಽಕಾರಿ ಹಾಗೂ ಅಧ್ಯಕ್ಷರು ಸಹಿ ಹಾಕಬೇಕೆಂಬ ಪಟ್ಟನ್ನು ಗ್ರಾಮದ ಒಂದು ತಂಡ ಮಾಡಿದರೆ, ಇನ್ನೊಂದು ತಂಡ ಯಾವುದೇ ಕಾರಣಕ್ಕೂ ಸಹಿ ಮಾಡಬಾರದು ಎಂದು ಅಧ್ಯಕ್ಷರ ಪರವಾಗಿ ನಿಂತುಕೊಂಡಿತು. ಇದರಿಂದ ಗ್ರಾಮಸಭೆ ಉದ್ವಿಗ್ನ ಪರಿಸ್ಥಿತಿಗೆ ತಲುಪಿತು. ಇದರ ಜತೆಗೆ ೨೦೧೦ರಿಂದ ನಡೆದ ಕಾಮಗಾರಿಗಳ ವಿಚಾರದಲ್ಲೂ ತನಿಖೆ ನಡೆಯಬೇಕೆಂಬ ಆಗ್ರಹ ಕೇಳಿ ಬಂತು.
ಸಭೆಯ ಮಾರ್ಗದರ್ಶಿ ಅಽಕಾರಿಯಾಗಿ ಅಶೋಕ್ ಕುಮಾರ್ ರೈ ಮಧ್ಯ ಪ್ರವೇಶಿಸಿ ಚೆಕ್‌ಸಹಿತ ಉಳಿದ ವಿಚಾರಗಳಿಗೆ ಸಹಿ ಮಾಡಿದ ಮೇಲೆ ಗ್ರಾಮಸಭೆ ವರದಿಗೆ ಸಹಿ ಮಾಡಬಹುದೆಂಬ ಸೂಚನೆ ನೀಡಿದರು. ಇದಕ್ಕೆ ಒಪ್ಪದ ಸಂದರ್ಭ ಪಂಚಾಯಿತಿ ಸದಸ್ಯರು ಅಗತ್ಯ ನಿರ್ಣಯ ಕೈಗೊಂಡು ಮುಂದಿನ ಕ್ರಮಕೈಗೊಳ್ಳಿ ಎಂಬ ಸಲಹೆ ನೀಡಿ ಪೊಲೀಸ್ ಭದ್ರತೆಯಲ್ಲಿ ಸಭೆ ಮುಂದುವರಿಸಿದರು. ಗ್ರಾಪಂ ಅಧ್ಯಕ್ಷೆ ನಫೀಸಾ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಅಶೋಕ್ ಎ., ಉಪಾಧ್ಯಕ್ಷೆ ಲಲಿತಾ, ಸದಸ್ಯರು ಉಪಸ್ಥಿತರಿದ್ದರು.