

ವಿಜಯವಾಣಿ ಸುದ್ದಿಜಾಲ ಧಾರವಾಡ
ಉದ್ಯೋಗಕ್ಕೆ ವಿದ್ಯಾರ್ಹತೆ ಇದ್ದರೆ ಸಾಲದು. ಒಳ್ಳೆ ನಡತೆ, ವ್ಯಕ್ತಿತ್ವ, ನೈತಿಕತೆ ಇದ್ದರೆ ಉದ್ಯೋಗವೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಾವು ನಿರ್ವಹಿಸುತ್ತಿರುವ ಕೆಲಸದಲ್ಲಿ ಪ್ರಾಮಾಣಿಕತೆ, ನಂಬಿಕೆ, ಪರಿಶ್ರಮ ಹಾಗೂ ಸಾಧಿಸುವ ಛಲವಿದ್ದಾಗ ನಾವು ನಮ್ಮ ೇತ್ರದಲ್ಲಿ ಸಾಧನೆ ಮಾಡಬಹುದು ಎಂದು ಜೆಎಸ್ಎಸ್ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಹೇಳಿದರು.
ನಗರದಲ್ಲಿ ವಿದ್ಯಾಗಿರಿ ಜೆಎಸ್ಎಸ್ ಹಾಗೂ ಬೆಂಗಳೂರಿನ ಬಾಷ್ ಬ್ರಿಡ್ಜ್ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ಉದ್ಯೋಗ ಅರಸಿಕೊಂಡು ಹೋಗುವ ಕಾಲವಿತ್ತು, ಆದರೆ ಈಗ ಉದ್ಯೋಗದಾತರೇ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ನಿಮ್ಮನ್ನು ಉದ್ಯೋಗಕ್ಕೆ ಆಹ್ವಾನಿಸುತ್ತಿದ್ದಾರೆ. ಇಂತಹ ಉತ್ತಮ ಅವಕಾಶ ಸದುಪಯೋಗಪಡಿಸಿಕೊಳ್ಳಿ. ಸಂದರ್ಶನ ನೀಡುವ ಮುನ್ನ ನಿಮ್ಮ ಅಗತ್ಯತೆ ಮನಗಂಡು ಕೌಶಲ ಬೆಳೆಸಿಕೊಳ್ಳಿ. ಸರಿಯಾದ ಸಮವಸ್ತ್ರ ನಿಮ್ಮದಾಗಿರಲಿ. ಗುರಿ ಹಾಗೂ ಮಾತಿನಲ್ಲಿ ಸ್ಪಷ್ಟತೆಯಿರಲಿ. ಹಿಂಜರಿಕೆಯಿಲ್ಲದೆ ಸಂದರ್ಶನ ನೀಡಿ ಎಂದರು.
ಬಾಷ್ ಬ್ರಿಡ್ಜ್ ಉದ್ಯೋಗಾಧಿಕಾರಿ ಖಲೀಮ್ ಮಾತನಾಡಿ, ಉದ್ಯೋಗಾವಕಾಶಗಳು ಹೇರಳವಾಗಿವೆ. ನಮ್ಮ ಸುತ್ತ ಆರಾಮದಾಯಕ ವಲಯದಲ್ಲೇ ಉದ್ಯೋಗ ಅರಸುತ್ತಾ ಹೋದರೆ, ನಿಮಗೆ ಉದ್ಯೋಗ ದೊರಕುವುದು ಕಷ್ಟಕರ. ನಮಗೆ ಸಿಗುವ ಉದ್ಯೋಗವಲಯದಲ್ಲೇ ಆಸಕ್ತಿ ವಹಿಸಿ ದುಡಿದು ಅದನ್ನೇ ನಮ್ಮ ಆರಾಮದಾಯಕ ವಲಯವನ್ನಾಗಿಸಿಕೊಳ್ಳಬೇಕು ಎಂದರು.
ಮಹೇಶ ಭಟ್ ಮಾತನಾಡಿದರು. ಜೆಎಸ್ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವಿರ ಉಪಾಧ್ಯೆ, ಇತರರು ಇದ್ದರು. ಬಾಷ್ ಕಂಪನಿಯ ಕೋ&ಆಡಿರ್ನೇಟರ್ ಸುಧೀರ ಪಿಡ್ಡಿ ನಿರೂಪಿಸಿದರು.