ಉಜ್ವಲ ಭವಿಷ್ಯಕ್ಕೆ ಕಠಿಣ ಪರಿಶ್ರಮ

19BK3
Published on

ಬಸವಕಲ್ಯಾಣ: ಸಾಧಿಸುವ ಛಲ, ಪೂರಕವಾಗಿ ಕಠಿಣ ಪರಿಶ್ರಮ ಹಾಗೂ ಸೂಕ್ತ ಮಾರ್ಗದರ್ಶನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ಬಟಗೇರಾ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಭಾರತಿ ಗೌಡರ ಹೇಳಿದರು.
ನಗರದ ಪುಣ್ಯಕೋಟಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಕಲಾ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಿದ್ದ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿ, ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಪುಣ್ಯಕೋಟಿ ಕಾಲೇಜು ವಿಶೇಷ ಕಾಳಜಿ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೋಷಕರ ಪ್ರತಿನಿಧಿಯಾಗಿ ನಾಗೇಂದ್ರ ಜೀವಣಗಿ ಮಾತನಾಡಿ, ವಿದ್ಯಾರ್ಥಿಗಳ ಗುಣಮಟ್ಟದ ಫಲಿತಾಂಶ ಪಡೆಯಬೇಕಾದರೆ ನಿರಂತರ ಅಧ್ಯಯನ, ಕಠಿಣ ಪರಿಶ್ರಮ ಹಾಕಬೇಕು. ಆಸಕ್ತಿಯಿಂದ ಅಭ್ಯಾಸ ಮಾಡಬೇಕು. ಮನೆಯಲ್ಲಿ ವಿದ್ಯಾರ್ಥಿಗಳು ಹತ್ತು ಸಲ ಓದುವುದಕ್ಕಿಂತ ಒಂದು ಸಲ ತರಗತಿಯಲ್ಲಿ ಉಪನ್ಯಾಸ ಗಮನವಿಟ್ಟು ಆಲಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಪ್ರೊ.ಸೂರ್ಯಕಾಂತ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕೋಶಾಧ್ಯಕ್ಷ ಶಶಿಕಾಂತ ಶೀಲವಂತ, ಕಾರ್ಯದರ್ಶಿ ಉಮಾಕಾಂತ ಶೀಲವಂತ, ನಿರ್ದೇಶಕಿ ಪ್ರೊ.ಸುರೇಖಾ ಶೀಲವಂತ ಮಾತನಾಡಿದರು. ಸೌರಭ ಶೀಲವಂತ ಇತರರಿದ್ದರು.
ಬೆಳ್ಳಿ ಪದಕ: ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕು ಮತ್ತು ಜಿಲ್ಲೆಗೆ ಟಾಪರ್ಸ್ಗಳಾದ ಪುಣ್ಯಕೋಟಿ ಕಾಲೇಜಿನ ವಿದ್ಯಾರ್ಥಿಗಳಾದ ಕಲಾ ವಿಭಾಗದ ಕೀರ್ತಿ ದುರ್ಯೋಧನ ಹಾಗೂ ವಾಣಿಜ್ಯ ವಿಭಾಗದ ಸುಮಿತ ವೀರಣ್ಣ ಅವರಿಗೆ ಬೆಳ್ಳಿ ಪದಕ ನೀಡಿ ಪ್ರೋತ್ಸಾಹಿಸಲಾಯಿತು. ಟಾಪ್‌ಟೆನ್ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು. ಮುಂಚೆ ಟಾಪರ್ಸ್ಗಳ ಪಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಪನ್ಯಾಸಕರಾದ ನಾಮದೇವ ಲಾತೂರೆ, ಅಶೋಕ ಪೋತೆ, ಕಿಶೋರ ಕುಲಕರ್ಣಿ, ಡಾ.ಸುರೇಶ ಮೂಳೆ, ಪ್ರಫುಲಕುಮಾರ, ವಿಜಯಲಕ್ಷಿ ಬಿರಾದಾರ, ಮಹಾದೇವಿ ದಾಸೂರೆ, ಸ್ವಪ್ನ ಮರಬಗೆ ಇತರರಿದ್ದರು. ಭವ್ಯಶ್ರೀ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶರಣಮ್ಮ ಸ್ವಾಗತಿಸಿದರು. ದ್ರಾಕ್ಷಾಯಣಿ ಹಾಗೂ ಗುಂಡಮ್ಮ ನಿರೂಪಣೆ ಮಾಡಿದರು. ಪ್ರಣೀತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net