ಇಚ್ಛಾ, ಜ್ಞಾನ, ಕ್ರಿಯಾಶಕ್ತಿಯಿಂದ ವ್ಯಕ್ತಿತ್ವ ವಿಕಸನ

Personality development through will, knowledge, and action
ತಾಳಿಕೋಟೆಯಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಮಾತನಾಡಿದರು.
Published on

ತಾಳಿಕೋಟೆ: ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಅಳವಡಿಸಿಕೊಂಡರೆ ವ್ಯಕ್ತಿತ ವಿಕಸನದ ಜತೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೈಕೋರ್ಟ್ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಅಭಿಮತ ವ್ಯಕ್ತಪಡಿಸಿದರು.

ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಭಾವಸಾರ ಕ್ಷತ್ರಿಯ ಕೋ-ಆಪ್ ಬ್ಯಾಂಕ್ ಆಶ್ರಯದಲ್ಲಿ ಅಂಬಾಭವಾನಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘಟನೆಯಲ್ಲಿ ಶಕ್ತಿ ಇದೆ ಎಂಬುದು ಇಸ್ರೇಲ್ ದೇಶ ತೋರಿಸಿಕೊಟ್ಟಿದೆ ಎಂದರು.

ಇಂದು ಶಿಕ್ಷಣ ಸಿಗುತ್ತಿದೆ. ಆದರೆ ಸಂಸ್ಕಾರ ಸಿಗುತ್ತಿಲ್ಲ. ನಮ್ಮ ಪೂರ್ವಜರು ಕಲಿಸಿಕೊಟ್ಟ ರಾಮಾಯಾಣ, ಮಹಾಭಾರತದ ಇತಿಹಾಸ ಇಂದು ಕಣ್ಮರೆಯಾಗುತ್ತಿದೆ ಎಂದರು.

ಉಪನ್ಯಾಸಕ ಸಂಗಣ್ಣ ಗದ್ದಿ, ಬಿ.ಕೆ.ಬ್ಯಾಂಕ್‌ನ ನಿವೃತ್ತ ನಿರ್ದೇಶಕ ಅರವಿಂದ ಹಂಚಾಟೆ, ಭಾವಸಾರ ಕ್ಷತ್ರಿಯ ಸಮಾಜದ ಮಾಜಿ ಅಧ್ಯಕ್ಷ ವಿ.ಬಿ. ಲೋಕರೆ ಮಾತನಾಡಿದರು.

ತಾಳಿಕೋಟೆ ಹಾಗೂ ಮುದ್ದೇಬಿಹಾಳ ನ್ಯಾಯವಾದಿಗಳಾದ ಎ.ಬಿ.ಮದರಕಲ್ಲ, ಸಿ.ಎಂ.ಅಸ್ಕಿ, ಝಡ್.ಕೆ.ಚಿತ್ತರಗಿ, ಎಸ್.ಆರ್.ಸಜ್ಜನ, ಕಾರ್ತಿಕ ಕಟ್ಟಿಮನಿ, ಎಂ.ಎಚ್.ಜೂಲಿ, ಎ.ಬಿ.ಗುಡಗುಂಟಿ, ಆರ್.ಎಚ್.ಇನಾಮದಾರ, ಎಂ.ಆರ್.ಪಾಟೀಲ, ವಿ.ಜಿ.ಮದರಕಲ್ಲ, ಮಾನಸಿಂಗ್ ಹಜೇರಿ, ಪಿ.ಎಂ.ಮುಂದಿನಮನಿ, ಎಂ.ಎಚ್.ಕ್ವಾರಿ, ಪಿ.ವೈ.ಮೇಟಿ ಹಾಗೂ ನಿವೃತ್ತ ಎಸ್ಪಿ ಎಸ್.ಬಿ.ಕಟ್ಟಿಮನಿ ಅವರು ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಅವರನ್ನು ಸನ್ಮಾನಿಸಿದರು. ಸಮಾಜದ ಅಧ್ಯಕ್ಷ ಮಲ್ಲಾರಿ ದರ್ಜಿ, ಬ್ಯಾಂಕ್ ಅಧ್ಯಕ್ಷ ದೇವಿದಾಸ ಮಹೇಂದ್ರಕರ, ಕವಿತಾ ಸಂಜೀವಕುಮಾರ ಹಂಚಾಟೆ ಉಪಸ್ಥಿತರಿದ್ದರು.

ಮಹೇಂದ್ರಕರ ಸ್ವಾಗತಿಸಿದರು. ಬಿ.ಕೆ.ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಪರಶುರಾಮ ತೇಲಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net