ಶಿಬಿರಗಳಿಂದ ವ್ಯಕ್ತಿತ್ವ ವಿಕಸನ

h15-Yoga
Published on

ಹುಬ್ಬಳ್ಳಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ನಾಲ್ಕು ದಿನಗಳ ವಸತಿ ಸಹಿತ ಉಚಿತ ಮಕ್ಕಳ ಯೋಗ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ಜರುಗಿತು.
ಗಾಯಕಿ ವೀಣಾ ಹಾನಗಲ್ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜತೆಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸಬೇಕು. ಇದರಿಂದ ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಸನ ಆಗುತ್ತದೆ ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿ ನಾಗರಾಜ ನಾಗರಹಳ್ಳಿ ಮಾತನಾಡಿ, ಮಕ್ಕಳೇ ಮುಂದಿನ ನಾಗರಿಕರು. ಅವರ ವ್ಯಕ್ತಿತ್ವ ರೂಪುಗೊಂಡರೆ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದರು. ದೀಪಕ್ ಕೊನಾ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ದಯಾನಂದ ಮಗಜಿಕೊಂಡಿ, ಸ್ನೇಹ ಬಾಡಗಿ, ಗೋಪಾಲಕೃಷ್ಣ ಜೋಶಿ, ಅಮರಾವತಿ ಗಾಣಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net