

ಯಳಂದೂರು: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಕೃಷ್ಣಜನ್ಮಾಷ್ಟಮಿಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳು ಕೃಷ್ಣ-ರಾಧೆ ವೇಷ ಧರಿಸಿ ಸಂಭ್ರಮಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟಸಿದ್ದಮ್ಮ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕೆ, ತರಬೇತಿ ಸೇರಿದಂತೆ ಸಾಕಷ್ಟು ಸೌಲಭ್ಯ ದೊರಕುತ್ತಿದ್ದು, ಪಾಲಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತಾಗಬೇಕು. ಅಲ್ಲಿನ ವಾತಾವರಣವೇ ಇಲ್ಲಿಯೂ ಇದ್ದು, ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಪಾಲಕರು ಇಲ್ಲಿಗೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.
ಕೃಷ್ಣ-ರಾಧೆಯನ್ನು ಪ್ರತಿನಿಧಿಸುವ ಮಕ್ಕಳು ನಮ್ಮ ಸಂಸ್ಕೃತಿಯನ್ನು ತಿಳಿಯುವುದರೊಂದಿಗೆ ಭಾಗಿಯಾಗಿ ಅದನ್ನು ಕಲಿಯಲು ಯತ್ನಿಸುತ್ತಾರೆ. ಇಂತಹ ಕಾರ್ಯಕ್ರಮ ಮಕ್ಕಳಲ್ಲಿ ಹೊಸ ಹುಮ್ಮಸ್ಸು ತುಂಬುವ ಜತೆಗೆ ಪಾಲಕರ ಗಮನವನ್ನೂ ಸೆಳೆಯುತ್ತದೆ. ಮಕ್ಕಳಿಗೆ ಇಂತಹ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನವಾಲಿದೆ ಎಂದರು.
ಶಾಲೆ ಶಿಕ್ಷಕಿಯರಾದ ರಾಧಾ, ಸೌಭಾಗ್ಯಲಕ್ಷ್ಮೀ, ಕುಮುದಾ, ವರಲಕ್ಷ್ಮೀ, ಪುಪ್ಪಲತಾ, ಶ್ರೀಧರ್‌ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಜೈಗುರು, ಸದಸ್ಯರಾದ ರೂಪಾ, ಚಂದ್ರಶೇಖರ, ದುಗ್ಗಹಟ್ಟಿ ಸಿ.ಸೌಮ್ಯಾ, ಡಿ.ಪಿ.ಮಹೇಶ್, ಸುಂದರ್, ಉಪ್ಪಿನಮೋಳೆ ಸತೀಶ್ ಇತರರು ಹಾಜರಿದ್ದರು.