ವ್ಯಕ್ತಿತ್ವ ವಿಕಸನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯ

2 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ವ್ಯಕ್ತಿತ್ವ ವಿಕಸ ಶಿಬಿರವು ಅತ್ಯವಶ್ಯಕ. ಇದು ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಕಲಿಕೆಗೆ ಉತ್ತೇಜನ ನೀಡುವುದಲ್ಲದೇ, ವಿದ್ಯಾರ್ಥಿ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ಬಿಬಿಎ, ಬಿಕಾಂ., ಬಿಎಸ್ಸಿ, ಬಿಸಿಎ, ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಯಶಸ್ಸಿನ ಭವಿಷ್ಯಕ್ಕೆ ಕೆಲ ಕೌಶಲಗಳ ಅಗತ್ಯವಿದೆ. ಸಂವಹನ ಕೌಶಲ, ಜ್ಞಾಪಕ ಶಕ್ತಿ ಹೆಚ್ಚಳ ಹೀಗೆ ಇತರ ಕೌಶಲಗಳನ್ನು ಸಂಪನ್ಮೂಲ ವ್ಯಕ್ತಿಗಳು ತಿಳಿಸಲಿದ್ದಾರೆ. ಜತೆಗೆ ವಿದ್ಯಾರ್ಥಿಗಳ ಬದುಕು ಬೆಳಗಲು ಪುಸ್ತಕಗಳ ಕೊಡುಗೆ ವಿಶೇಷವಾದದ್ದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಶ್ರದ್ಧೆಯಿಂದ ಓದುವಿಕೆಯಲ್ಲಿ ತೊಡಗಿಕೊಳ್ಳಬೇಕು. ಪಠ್ಯದ ಜತೆಗೆ ಪ್ರಚಲಿತ ವಿದ್ಯಮಾನಗಳ ಅರಿವು ಮುಖ್ಯ ಎಂದರು.

ಡಾ. ಆರ್​.ವಿ. ಚಿಟಗುಪ್ಪಿ, ಪ್ರೊ.ಎನ್​.ಜಿ.ಪುಡಕಲಕಟ್ಟಿ, ಇತರರು ಇದ್ದರು. ಡಾ. ಸೂರಜ್​ ಜೈನ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net