

ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಿತು. ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರ ಮೈಸೂರಿನ ಸತೀಶ ಅವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ವಾರ್ಗಗಳು ಮತ್ತು ಜೀವನ ಕೌಶಲ್ಯಗಳ ಕುರಿತಾದ ವಿಚಾರಗಳ ಬಗ್ಗೆ ತರಬೇತಿ ನೀಡಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ವಸತಿ ಶಾಲೆ ಪ್ರಾಂಶುಪಾಲ ಶರಣಕುವಾರ ವಾರ್ಗದರ್ಶನದಲ್ಲಿ ಅಧ್ಯಯನದ ತಂತ್ರ, ಏಕಾಗ್ರತೆ ಹೊಂದುವ ವಾರ್ಗ, ಓದುವಿಕೆಯ ವೇಗ ಹೆಚ್ಚಿಸಿಕೊಳ್ಳುವ ಕೌಶಲ್ಯ, ಅತ್ಯುತ್ತಮ ಆಹಾರ ಪದ್ಧತಿ, ಜೀವನ ಕೌಶಲ್ಯ, ಸ್ವಪ್ರೇರಣೆಯ ತಂತ್ರ, ಸ್ಮರಣಶಕ್ತಿ ಹೆಚ್ಚಿಸುವ ತಂತ್ರೋಪಾಯ, ಸುಲಭ ಲೆಕ್ಕಾಚಾರದ ವಾರ್ಗೋಪಾಯಗಳು ಇತ್ಯಾದಿ ವಿಚಾರಗಳ ಕುರಿತು ತರಬೇತಿ ನೀಡಲಾಯಿತು. ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.