ವ್ಯಕ್ತಿತ್ವ ರೂಪಿಸುವಂತಿರಬೇಕು ಶಿಕ್ಷಣ ವ್ಯವಸ್ಥೆ...

Red Cross
Published on

ಬಸ್ರೂರು ರಾಜೀವ ಶೆಟ್ಟಿ ಅನಿಸಿಕೆ

ರೆಡ್​ ಕ್ರಾಸ್​ ಭವನದಲ್ಲಿ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜ್ಞಾನ ಗಳಿಕೆ ಮಾತ್ರ ಶಿಕ್ಷಣದ ಉದ್ದೇಶವಲ್ಲ. ಅದು ಜ್ಞಾನಾರ್ಥಿಗಳ ಶಕ್ತಿಯನ್ನು ಹೊರತೆಗೆದು ವ್ಯಕ್ತಿತ್ವ ರೂಪಿಸಬೇಕು. ಅದರಲ್ಲಿ ಪಠ್ಯ ಪೂರಕ ಚಟುವಟಿಕೆಗಳೂ ಮಹತ್ವದ ಪಾತ್ರ ವಹಿಸುತ್ತವೆ. ರೆಡ್​ ಕ್ರಾಸ್​ನ ಶಿಬಿರಗಳು ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿದೆ ಎಂದು ರಾಜ್ಯ ರೆಡ್​ ಕ್ರಾಸ್​ನ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ರೆಡ್​ ಕ್ರಾಸ್​ ಭವನದಲ್ಲಿ ಮೇ 27ರಂದು ಬೆಳಗ್ಗೆ ಆಯೋಜಿಸಿದ್ದ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮೂರು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತಾನಾಡಿದರು.

ಜಿಲ್ಲಾ ರೆಡ್​ ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಶಿಬಿರವು ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಪಡೆಯಲು ಸಹಕಾರ ನೀಡುತ್ತದೆ ಎಂದರು.

ರೆಡ್​ ಕ್ರಾಸ್​ನ ಖಜಾಂಚಿ ರಮಾದೇವಿ, ವಿಕಲಚೇತನರ ಪುನರ್ವಸತಿ ಕೇಂದ್ರದ ಅಡಿಯಾಲಜಿಸ್ಟ್​ ನೆಲಿಶಾ ಮೆರಿಲ್​ ಜತ್ತನ್ನ, ಕಾಲೇಜಿನ ರೆಡ್​ ಕ್ರಾಸ್​ ಘಟಕದ ನಾಯಕಿ ನವ್ಯಾ ಹೆಗ್ಡೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಾಲೇಜಿನ ರೆಡ್​ ಕ್ರಾಸ್​ ಸಂಯೋಜಕಿ ಡಾ. ವಿದ್ಯಾ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಾ ದೇವಾಡಿಗ ವಂದಿಸಿದರು. ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net