ಮಂಚಿ ಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ

New Project
Published on

ಬಂಟ್ವಾಳ: ಮಂಚಿಯ ಕೊಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ ಮಾನಸಿಕ ಸ್ವಾಸ್ಥೃ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆಯಿತು.

ಲಯನ್ಸ್ ಸೇವಾ ಟ್ರಸ್ಟಿನ ಅಧ್ಯಕ್ಷ ಡಾ.ಗೋಪಾಲ್ ಆಚಾರ್ ಮಂಚಿ ಉದ್ಘಾಟಿಸಿದರು. ಕೊಳ್ನಾಡು- ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಉಮಾನಾಥ ರೈ ಮೇರಾವು ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿದ್ಯಾಸಂಸ್ಥೆಯ ಮಾನಸಿಕ ಆರೋಗ್ಯ ಸುಶ್ರೂಷೆ ವಿಭಾಗದ ಸಹಾಯಕ ಪ್ರೊಫೆಸರ್ ಸುಕೇಶ್ ಶೆಟ್ಟಿ ಕಾರ್ಯಾಗಾರ ನಡೆಸಿಕೊಟ್ಟರು.

ಪ್ರಮುಖರಾದ ನಿಶ್ಚಲ್ ಜಿ.ಶೆಟ್ಟಿ ಕಲ್ಲಾಡಿ, ಮನೋರಂಜನ್ ಕೆ.ಆರ್., ಜಯಪ್ರಕಾಶ್ ರೈ ಮೇರಾವು ಉಪಸ್ಥಿತರಿದ್ದರು. ರಾಜಲಕ್ಷ್ಮೀ ಮನೋರಂಜನ್ ಉಪಸ್ಥಿತರಿದ್ದರು. ಸುಶೀಲಾ ವಿಟ್ಲ ಸ್ವಾಗತಿಸಿದರು. ಬಾಲಕೃಷ್ಣ ಸೆರ್ಕಳ ವಂದಿಸಿದರು. ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net