ಸಂಘಟನೆಗಳಿಗೆ ಸೇರಿದರೆ ವ್ಯಕ್ತಿತ್ವ ವಿಕಸನ

Bel_Personality
Published on

ಬೆಳ್ತಂಗಡಿ: ಸಂಘಟನೆಗಳಲ್ಲಿ ತೊಡಗಿಕೊಳ್ಳುವ ಮುಖೇನ ಸಮಾಜ ಹಾಗೂ ಸಂಸ್ಥೆಗಳಲ್ಲಿ ನಾವು ಗುರುತಿಸಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಸಂಸ್ಥೆಗಳಲ್ಲಿ ಸಂಘಟನೆ ಉದ್ಯೋಗಿಗಳ ಮಾನಸಿಕ ಸಾಮರ್ಥ್ಯ ದೃಢಗೊಳಿಸುತ್ತದೆ ಎಂದು ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.

ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘ ಉದ್ಘಾಟಿಸಿ ಮಾತನಾಡಿ, ಸಂಘಗಳ ಸ್ಥಾಪನೆಯ ಉದ್ದೇಶ ಸಮಾಜಮುಖಿಯಾಗಿರಬೇಕು. ಸಂಘಗಳ ಚಟುವಟಿಕೆಗಳು ಸಂಸ್ಥೆ ಹಾಗೂ ಉದ್ಯೋಗಿಗಳ ಅಭಿವೃದ್ಧಿಗೆ ಪೂರಕವಾಗಿರಬೇಕು. ಆಗ ಮಾತ್ರ ಸಂಘಟನೆಗಳ ಸ್ಥಾಪನೆ ಸಾರ್ಥಕವಾಗುತ್ತದೆ ಎಂದರು.

ಎಸ್‌ಡಿಎಂ ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಶ್ವನಾಥ್ ಪಿ. ಶುಭ ಹಾರೈಸಿದರು. ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಸಂಘದ ನೂತನ ಅಧ್ಯಕ್ಷ ಪ್ರಮೋದ್ ಕುಮಾರ್ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಕೋಶಾಧಿಕಾರಿ ಬೇಬಿ, ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಪ್ರಾಚಾರ್ಯ ಹಾಗೂ ಸಂಘದ ನೂತನ ಕಾರ್ಯದರ್ಶಿ ಡಾ.ರಾಜೇಶ್ ಬಿ. ಸ್ವಾಗತಿಸಿದರು. ನೂತನ ಜತೆಕಾರ್ಯದರ್ಶಿ ಮಹಾವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net