ವೈಯಕ್ತಿಕ ಶೌಚಗೃಹ ಬಳಸಲು ಮುಂದಾಗಿ

ceo
ಕಂಪ್ಲಿ ತಾಲೂಕಿನ ಮಾವಿನಹಳ್ಳಿ ಗ್ರಾಮಕ್ಕೆ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್ ಭೇಟಿ ನೀಡಿ ಪರಿಶೀಲಿಸಿದರು. ಇಒ ಆರ್.ಕೆ.ಶ್ರೀಕುಮಾರ, ಎಡಿ ಕೆ.ಎಸ್.ಮಲ್ಲನಗೌಡ, ಪಿಡಿಒ ಹನುಮಂತಪ್ಪ, ಗ್ರಾಪಂ ಅಧ್ಯಕ್ಷ ಎ.ಕೆ.ಲೋಕೇಶ ಇತರರಿದ್ದರು.
Published on

ಕಂಪ್ಲಿ: ಲೂಕಿನ ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಮಾವಿನಹಳ್ಳಿಗೆ ಬುಧವಾರ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್ ಗ್ರಾಮಸ್ಥರೊಂದಿಗೆ ಮಾತನಾಡಿ, ವೈಯಕ್ತಿಕ ಶೌಚಗೃಹ ಬಳಸುವ ಮೂಲಕ ಗ್ರಾಮವನ್ನು ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮವನ್ನಾಗಿ ರೂಪಿಸಬೇಕು. ಮನೆಯಲ್ಲಿಯೇ ತಾಜ್ಯವನ್ನು ಹಸಿ, ಒಣ ಕಸ ವಿಂಗಡಿಸಿ, ಕಸ ವಿಲೇವಾರಿ ವಾಹನಕ್ಕೆ ನೀಡಬೇಕು. ರಸ್ತೆ, ಚರಂಡಿಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು.

ಸ್ವಚ್ಛತೆ ಕಾಪಾಡಿ

ಮನೆ ಬಳಕೆ ನೀರನ್ನು ಮನೆ ಮುಂದಿನ ರಸ್ತೆಗೆ ಹರಿಸಬಾರದು. ಈ ನೀರನ್ನು ಇಂಗುಗುಂಡಿಗೆ ಹರಿಸಬೇಕು. ನರೇಗಾದಡಿಯಲ್ಲಿ ಇಂಗುಗುಂಡಿ ನಿರ್ಮಿಸಿಕೊಳ್ಳುವಲ್ಲಿ ಮುಂದಾಗಬೇಕು. ಸ್ವಚ್ಛತೆ ಕಾಪಾಡಿಕೊಂಡಲ್ಲಿ ಸಾಂಕ್ರಾಮಿಕ ರೋಗ ಮುಕ್ತಗ್ರಾಮವನ್ನಾಗಿಸಬಹುದು ಎಂದು ಸಲಹೆ ನೀಡಿದರು. ಗ್ರಾಮದಲ್ಲಿ ಸಂಚರಿಸಿ ಸ್ವಚ್ಛತೆ ವ್ಯವಸ್ಥೆ ಪರಿಶೀಲಿಸಿದರು.

ಸಹಿಪ್ರಾ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ವ್ಯವಸ್ಥೆ ಕುರಿತು ವಿಚಾರಿಸಿದರು. ಗ್ರಾಮದ ರಸ್ತ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ನೀರೆರೆದರು.


ತಾಪಂಇಒ ಆರ್.ಕೆ.ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಪಿಡಿಒ ಹನುಮಂತಪ್ಪ, ಕಾರ್ಯದರ್ಶಿ ಎಚ್.ಶಿವಪ್ಪ, ಗ್ರಾಪಂ ಅಧ್ಯಕ್ಷ ಎ.ಕೆ.ಲೋಕೇಶ, ಸದಸ್ಯರಾದ ನಾಗಸುಬ್ಬಯ್ಯ, ತಿಪ್ಪಯ್ಯ, ಮುಖಂಡರಾದ ಸುಭಾನಿ, ಸಣ್ಣಪ್ಪ, ಹೊನ್ನೂರಪ್ಪ, ಮೌಲಾಸಾಬ್, ಹೊನ್ನೂರುಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net