

ಯಲಬುರ್ಗಾ: ಹದಿಹರೆಯದವರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ಎಂದು ಸ್ನೇಹ ಕ್ಲಿನಿಕ್ ಆಪ್ತ ಸಮಾಲೋಚಕ ಶರಣಪ್ಪ ಉಪ್ಪಾರ್ ಹೇಳಿದರು.
ಇದನ್ನೂ ಓದಿ: ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ
ತಾಲೂಕಿನ ಗೆದಗೇರಿ ಗ್ರಾಮದ ಸರ್ಕಾರ ಪ್ರೌಢ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಹದಿಹರೆಯದವರಿಗೆ ಆರೋಗ್ಯ ಮತ್ತು ಕ್ಷೇಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
10 ರಿಂದ 19 ವಷರ್ದ ವಯಸ್ಸಿನ ಕಿಶೋರ ಕಿಶೋರಿಯರಲ್ಲಿ ದೈಹಿಕ ಬದಲಾವಣೆಗಳಾಗುವುದು ಸಾಮಾನ್ಯ. ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಿ. ತರಕಾರಿ, ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರಕ್ತ ಹೀನತೆ ತಪ್ಪಿಸಿಕೊಳ್ಳಬೇಕು. ಯಾವುದೇ ರೀತಿಯ ಆರೋಗ್ಯ ಸಲಹೆಗಳಿಗಾಗಿ ಮುಜುಗರ ಪಟ್ಟುಕೊಳ್ಳದೇ ಸ್ನೇಹ ಕ್ಲಿನಿಕ್‌ಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದರು.
ಸಿಎಚ್‌ಒ ಶಿವಮ್ಮ ಮಾತನಾಡಿ, ಕಿಶೋರಿಯರಲ್ಲಿ ಋತುಚಕ್ರವು ಸಹಜ ಪ್ರಕ್ರಿಯೆ. ಈ ಸಮಯದಲ್ಲಿ ಶುಚಿತ್ವ ಕಾಯ್ದುಕೊಳ್ಳುವುದು ಮುಖ್ಯ. ಸ್ಯಾನಿಟರಿ ನ್ಯಾಪ್ಕಿನ್ ಬಟ್ಟೆ ಮತ್ತು ಬಳಸುವ ವಿಧಾನಗಳ ಬಗ್ಗೆ ತಿಳಿಯಬೇಕು ಎಂದರು.
ಮುಖ್ಯಶಿಕ್ಷಕ ನಾಗಭೂಷಣ ಚಿನಿವಾಲ, ಶಿಕ್ಷಕರಾದ ಸಂಗಪ್ಪ ಸಂಗಳದ, ಶಿವಶಂಕರಯ್ಯ ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷ ಅಶೋಕ ಕೋಳೀಹಾಳ, ಆಶಾ ಕಾರ್ಯಕರ್ತೆ ಭಾಗ್ಯಮ್ಮ ಗೊಲ್ಲರ್, ಜಯಶ್ರೀ ಕುರ್ನಾಳ ಇದ್ದರು.