ಟೈಯರ್​ ಬಿಚ್ಚುತ್ತಿದ್ದ ವ್ಯಕ್ತಿ ವಾಹನ ಡಿಕ್ಕಿಯಾಗಿ ಸಾವು

Crime Logo
Published on

ಹಾವೇರಿ: ಪಂಚರ್​ ಆಗಿ ನಿಂತಿದ್ದ ಟಾಟಾಎಎಸ್​ ವಾಹನದ ಟೈಯರ್​ ಬಿಚ್ಚುತ್ತಿದ್ದ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ದೇವಿಹೊಸೂರ ಬಳಿ ಎನ್​ಎಚ್​-48ರಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಶಿವಾನಂದ ಸದಪ್ಪ ಅವಟಿ (21) ಮೃತ ಯುವಕ.

ಈತ ಟಾಟಾಎಎಸ್​ ವಾಹನದಲ್ಲಿ ಕ್ಯಾಪ್ಸಿಕಮ್​ ಹೇರಿಕೊಂಡು ಹಾವೇರಿಗೆ ಬರುತ್ತಿದ್ದ. ಈ ಸಮಯದಲ್ಲಿ ವಾಹನ ಪಂಚರ್​ ಆಗಿದ್ದರಿಂದ ಟೈಯರ್​ ಬದಲಾಯಿಸಲು ಮುಂದಾಗಿದ್ದ. ಆಗ ಯಾವುದೋ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net