ಹತ್ತು ಪಟ್ಟು ಬೆಲೆಗೆ ಆಕ್ಸಿಜನ್ ಸಿಲಿಂಡರ್​ ಮಾರಾಟ : ಓರ್ವನ ಬಂಧನ

ravi
Published on

ಬೆಂಗಳೂರು : ಕರೊನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್​ಗಳನ್ನು ಹತ್ತು ಪಟ್ಟು ಹಣ ಪಡೆದು ಮಾರುತ್ತಿದ್ದ ಗ್ಯಾಸ್​ ಕಂಪೆನಿಯ ಸಿಬ್ಬಂದಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಒಂದು 47 ಲೀಟರ್ ಆಕ್ಸಿಜನ್ ಸಿಲಿಂಡರ್​ಗೆ ಸರ್ಕಾರ ನಿಗದಿಪಡಿಸಿರುವ ಬೆಲೆ 300 ರೂ.ಗಳಾದರೆ, 3,000 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ನಗರದ ಹೊರವಲಯದ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸೀಗಾ ಗ್ಯಾಸಸ್ ಪ್ರೈ. ಲಿಮಿಟೆಡ್​ ಕಂಪೆನಿಯ ಕಛೇರಿ ಮೇಲೆ ಇಂದು ನಗರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ರೇಡ್​ ನಡೆಸಿದರು. ಆಗ ಕಂಪೆನಿಯ ವಿಭಾಗ ಮುಖ್ಯಸ್ಥ ರವಿಕುಮಾರ್​(36) ಎಂಬುವ, ಎರಡು ಆಕ್ಸಿಜನ್​ ಸಿಲಿಂಡರ್​ಗಳನ್ನು 6000 ರೂ.ಗಳಿಗೆ ಮಾರುತ್ತಿದ್ದು, ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

ಪೀಣ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 420, ಡ್ರಗ್​ ಪ್ರೈಸ್​ ಕಂಟ್ರೋಲ್ ಆರ್ಡರ್​ನ ಸೆಕ್ಷನ್ 27 ಮತ್ತು ಇಸಿ ಕಾಯ್ದೆಯ ಸೆಕ್ಷನ್​ 3, 7 ರಡಿ ಮೊಕದ್ದಮೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net