

ರಾಮದುರ್ಗ: ವಿದ್ಯಾರ್ಥಿಗಳು ಆಸಕ್ತಿಯಿಂದ ನಿರಂತರ ಅಧ್ಯಯನ ಮಾಡಿದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ಹುಬ್ಬಳ್ಳಿ ಲೆಕ್ಕ ಪರಿಶೋಧಕ ಶಿವಾನಂದ ಮಲಗಾಂವಿ ಹೇಳಿದರು.
ಪಟ್ಟಣದ ಸುಶೀಲಾತಾಯಿ ವೆ.ಕುಲಗೋಡ ಪಿ.ಯು. ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ವಾಣಿಜ್ಯ ವಿಭಾಗದಲ್ಲಿ ವಿಪುಲ ಅವಕಾಶಗಳು ಎಂಬ ಉಪನ್ಯಾಸದಲ್ಲಿ ಮಾತನಾಡಿ, ಪಿ.ಯು. ಪರೀೆ ಪಾಸಾಗಲು ಏಕಾಗ್ರತೆ, ದಢನಿಶ್ಚಯ, ಹೆಚ್ಚಿನ ತಾಳ್ಮೆ, ಪರಿಶ್ರಮ ಬೇಕು ಎಂದು ತಿಳಿಸಿದರು.
ವಿದ್ಯಾಪ್ರಸಾರಕ ಸಮಿತಿಯ ಸದಸ್ಯ ಪಿ.ಎಂ.ಜಗತಾಪ ಮಾತನಾಡಿ, ಸಾಧಿಸುವ ಛಲ ಇದ್ದರೆ ಖಂಡಿತ ಯಶಸ್ಸು ದೊರೆಯುತ್ತದೆ ಎಂದರು.
ವಿದ್ಯಾ ಪ್ರಸಾರಕ ಸಮಿತಿ ಅಧ್ಯ ಟಿ.ದಾಮೋದರ ಅಧ್ಯತೆ ವಹಿಸಿದ್ದರು. ಎಸ್.ಬಿ. ಹರ್ತಿ, ಬಿ.ವೈ.ತಳವಾರ. ಆರ್.ಎಸ್.ಪೋಳ, ಪ್ರಾಚಾರ್ಯ ಎಂ.ಬಿ. ಪಾಟೀಲ, ಎಂ.ಆರ್. ಕುಂಬಾರ, ಬಿ.ಆರ್.ಪಮ್ಮಾರ ಇತರರಿದ್ದರು.