ಸತತ ಪ್ರಯತ್ನ ಸಾಧನೆಯ ಮೂಲ

12 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸತತ ಪ್ರಯತ್ನ ಸಾಧನೆಯ ಮೂಲ. ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಕಠಿಣ ಶ್ರಮ ವಹಿಸಬೇಕು. ಕಾಲೇಜು ಜೀವನದಲ್ಲಿ ಎಡವಿದರೆ ಜೀವನ ಪರ್ಯಂತ ಏಳಿಗೆ ಆಗುವುದಿಲ್ಲ ಎಂದು ಸೈಬರ್ ಅಪರಾಧ ಪೊಲೀಸ್ ಠಾಣೆ ಡಿವೈಎಸ್‌ಪಿ ಶಿವಾನಂದ ಕಟಗಿ ಹೇಳಿದರು.

ನಗರದ ವೈ.ಬಿ. ಅಣ್ಣಿಗೇರಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ 2025- 26ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗೇಶ ಅಣ್ಣಿಗೇರಿ ಮಾತನಾಡಿ, ತಾವು ಅನುಭವಿಸಿದ ಕಷ್ಟಗಳನ್ನು ಸ್ಮರಿಸಿಕೊಂಡರು.

ಸ0ಸ್ಥೆಯ ಉಪಾಧ್ಯಕ್ಷ ಪ್ರಕಾಶ ಜವಳಿ, ಕಾರ್ಯದರ್ಶಿ ರೇಖಾ ನಾಗೇಶ ಅಣ್ಣಿಗೇರಿ, ಉಪ ಪ್ರಾಚಾರ್ಯ ಪ್ರೊ. ಸಚಿನ ಕಮತೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಶೆಟ್ಟೆಪ್ಪ ಹೊಸಳ್ಳಿ, ಇತರರಿದ್ದರು.

ಸಾಂಸ್ಕೃತಿಕ ಕಾರ್ಯದರ್ಶಿ ಪ್ರೊ. ಬಸವರಾಜ ಉಡಿಕೇರಿ ಸ್ವಾಗತಿಸಿದರು. ಪ್ರಾಚಾರ್ಯ ಪ್ರೊ. ಮಹಾಬಳೇಶ್ವರಯ್ಯ ಚಿಟ್ಟಿ ಪರಿಚಯಿಸಿದರು. ಪ್ರೊ. ಅನ್ನಪೂರ್ಣಾ ಕುಲಮಿ ನಿರೂಪಿಸಿದರು. ಪ್ರೊ. ಮಂಗಳಾ ಮೀಟಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net