ಸತತ ಪರಿಶ್ರಮಪಟ್ಟು ದುಡಿದರೆ ಜೀವನದಲ್ಲಿ ಯಶಸ್ಸು ಸಾಧ್ಯ

7Kagwad1-Web
ಶಿವಾನಂದ ಕಾಲೇಜಿನ ನೂತನ ಪ್ರಾಚಾರ್ಯ ಪ್ರೊ.ಬಿ.ಎ.ಪಾಟೀಲ ಅವರನ್ನು ಸತ್ಕರಿಸಲಾಯಿತು. ಬಿ.ಎ.ಪಾಟೀಲ, ಪ್ರೊ. ಶಿವಾನಂದ ಅವಟಿ ಇತರರಿದ್ದರು.
Published on

ಕಾಗವಾಡ: ಬಡತನ ಎಂಬುದು ಶಾಪವೆಂದು ತಿಳಿದುಕೊಳ್ಳದೆ ಸತತವಾಗಿ ಶ್ರಮಪಟ್ಟರೆ ನಮ್ಮ ಛಲಕ್ಕೆ ತಕ್ಕ ಫಲ ದೊರೆಯುತ್ತದೆ ಎಂದು ಶಿವಾನಂದ ಮಹಾವಿದ್ಯಾಲಯದ ನೂತನ ಪ್ರಾಚಾರ್ಯ ಪ್ರೊ.ಬಿ.ಎ.ಪಾಟೀಲ ಹೇಳಿದರು. ಪಟ್ಟಣದ ಕೇದಾರ ಯುವಕ ಮಂಡಳ ಕಾಗವಾಡ ವತಿಯಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪ್ರೊ.ಜೆ.ಕೆ.ಪಾಟೀಲ ಮಾತನಾಡಿ, ಸಮಾಜಕ್ಕಾಗಿ ಸಮಯ ವ್ಯಯಿಸುವ ಪಾಟೀಲರ ವ್ಯಕ್ತಿತ್ವ ಮಾದರಿ ಎಂದರು. ಬಿ.ಎ.ಪಾಟೀಲ, ಪ್ರೊ. ಶಿವಾನಂದ ಅವಟಿ, ಜ್ಯೋತಿಕುಮಾರ ಪಾಟೀಲ, ಕಾಕಾಸಾಬ ಪಾಟೀಲ, ಕಲಗೌಡ ಪಾಟೀಲ, ಪವನ ಪಾಟೀಲ, ಸಿದಗೌಡ ವಿಲಾಸ ಪಾಟೀಲ, ಚೇತನ ಪಾಟೀಲ, ಜ್ಯೋತಗೌಡ ಪಾಟೀಲ, ಸುನೀಲ ಪಾಟೀಲ, ಪೋಪಟ ಪಾಟೀಲ ಇದ್ದರು. ವಿನಾಯಕ ಪಾಟೀಲ ಸ್ವಾಗತಿಸಿದರು. ಶಿವಾನಂದ ಪಾಟೀಲ ವಂದಿಸಿದರು. ಎ.ಎಸ್. ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net