

ಮಹಾಲಿಂಗಪುರ: ಲಿತಾಂಶ ಸುಧಾರಣೆಗೆ ಪರಿಶ್ರಮವೇ ಮುಖ್ಯವಾಗಿದ್ದು, ಅದನ್ನು ಬಿಟ್ಟು ಪರ್ಯಾಯ ಮಾರ್ಗವೇ ಇಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಹೇಳಿದರು.
ಇಲ್ಲಿನ ಕೆ.ಎಲ್.ಇ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಸ್.ಸಿ.ಪಿ. ಪ್ರೌಢಶಾಲೆ, ಕೆ.ಎಲ್.ಇ. ಡಿಪ್ಲೊಮಾ ಕಾಲೇಜ್ ಹಾಗೂ ತಾಲೂಕು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯುದ್ಧ ಕಾಲೇ ಸಮರಾಭ್ಯಾಸ ಎಂಬಂತೆ ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ಓದಲು ಪ್ರಾರಂಭಿಸುತ್ತಾರೆ. ಒತ್ತಡದಲ್ಲಿ ಅಧ್ಯಯನ ಮಾಡುವ ಪರಿಪಾಠ ಬಿಟ್ಟು ಮೊದಲಿನಿಂದಲೇ ಎಲ್ಲ ವಿಷಯಗಳ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಎಸ್.ಐ. ಕುಂದಗೋಳ, ತಾಲೂಕು ನೋಡಲ್ ಅಧಿಕಾರಿ ಸಂಗಮೇಶ ನೀಲಗುಂದ, ಉಪನ್ಯಾಸಕ ಶಿವಲಿಂಗ ಸಿದ್ನಾಳ, ಶಿಕ್ಷಕ ನಾರನಗೌಡ ಉತ್ತಂಗಿ, ಶಿಕ್ಷಕರಾದ ಎಂ.ಎಲ್. ರಮೇಶಬಾಬು ಮತ್ತು ಎಸ್.ಆರ್. ಅಡ್ಲಿಮಠ, ಮುಖ್ಯಶಿಕ್ಷಕಿ ಜಯಶ್ರೀ ಹಿರೇಮಠ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ. ಕುರಣಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎ.ಆರ್. ಛಬ್ಬಿ, ಎಸ್.ಸಿ.ಪಿ. ಪ್ರೌಢಶಾಲೆ ಉಪಪ್ರಾಂಶುಪಾಲ ಬಿ.ಎನ್. ಅರಕೇರಿ ಉಪಸ್ಥಿತರಿದ್ದರು.
18 ಪ್ರೌಢಶಾಲೆಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಸಂಜನಾ ಹೊಸೂರ ಭರತನಾಟ್ಯ ಪ್ರದರ್ಶಿಸಿದರು. ಧನಂಜಯ ಕುಲಕರ್ಣಿ ವಂದಿಸಿದರು. ಸವಿತಾ ಬೀಳಗಿ ನಿರೂಪಿಸಿದರು.