ಪರಿಶ್ರಮ ಪಟ್ಟರೆ ಗುರಿ ಸಾಧನೆ ಸಾಧ್ಯ

16Anand5
ನಗರದ ಕೆಎಲ್‌ಎಸ್ ಗೋಗಟೆ ಕಾಲೇಜ್ ಆ್ ಕಾಮರ್ಸ್‌ನ ಬಿಸಿಎ ವಿಭಾಗದಿಂದ ಈಚೆಗೆ ಹಮ್ಮಿಕೊಂಡಿದ್ದ ಎಕ್ಸೆಲೆನ್ಸಿಯಾ ಕಾರ್ಯಕ್ರಮವನ್ನು ಡಾ.ವೇಣುಗೋಪಾಲ ಜಾಲಿಹಾಳ ಉದ್ಘಾಟಿಸಿದರು. ಡಾ.ಅಸ್ಮಿತಾ ದೇಶಪಾಂಡೆ, ಪ್ರೊ.ಗೋವಿಂದ ಹುಯಿಲಗೋಳ, ಪ್ರೊ.ವೈಶಾಲಿ ಶಾನಭಾಗ, ಪ್ರೊ.ಕರುಣಾ ದೇಶಪಾಂಡೆ ಇತರರಿದ್ದರು.
Published on

ಬೆಳಗಾವಿ: ಕಠಿಣ ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕತೆಯನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೇ ಗುರಿ ತಲುಪಲು ಸಾಧ್ಯ ಎಂದು ನಗರ ಕೆಎಲ್‌ಎಸ್ ಗೋಗಟೆ ಕಾಲೇಜ್ ಆ್ ಕಾಮರ್ಸ್ ಪ್ರಾಂಶುಪಾಲ ಡಾ.ವೇಣುಗೋಪಾಲ ಜಾಲಿಹಾಳ ಹೇಳಿದರು.

ನಗರದ ಕೆಎಲ್‌ಎಸ್ ಗೋಗಟೆ ಕಾಲೇಜ್ ಆ್ ಕಾಮರ್ಸ್‌ನ, ಬಿಸಿಎ ವಿಭಾಗದಿಂದ ಈಚೆಗೆ ಏರ್ಪಡಿಸಿದ್ದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಎಕ್ಸೆಲೆನ್ಸಿಯಾ-2025 ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಸಿಎ ಸಂಯೋಜಕಿ ಡಾ.ಅಸ್ಮಿತಾ ದೇಶಪಾಂಡೆ, ಪ್ರೊ.ಗೋವಿಂದ ಹುಯಿಲಗೋಳ, ಪ್ರೊ.ವೈಶಾಲಿ ಶಾನಭಾಗ, ಪ್ರೊ.ಕರುಣಾ ದೇಶಪಾಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net