

ವಿಜಯಪುರ: ಮಕ್ಕಳು ಸತತ ಪರಿಶ್ರಮದಿಂದ ಅಧ್ಯಯನ ನಡೆಸುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸದ್ಯ ನೀವು ಶ್ರಮವಹಿಸಿ ಜ್ಞಾನಾರ್ಜನೆ ಮಾಡಿದರೆ ಮುಂದಿನ ಜೀವನ ಸುಲಭವಾಗಿರಲಿದೆ ಎಂದು ಪ್ರಾರ್ಥನಾ ಶಿಣ ಸಂಸ್ಥೆ ಸಂಸ್ಥಾಪಕ ಎಚ್.ಎಂ. ಸಾರವಾಡ ಸಲಹೆ ನೀಡಿದರು.
ನಗರ ಹೊರವಲಯದ ಜುಮನಾಳ ರಸ್ತೆ ಬಳಿಯ ಪ್ರಾರ್ಥನಾ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಎಸ್ಎಸ್ಎಲ್ಸಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಈರಣ್ಣ ಪೂಜಾರ, ಕೆ.ಬಿ. ಪ್ರವಿಣಕುಮಾರ ಹಾಗೂ ಬಿ.ಎಲ್. ಜಂಬಗಿ ಮಕ್ಕಳಿಗೆ ಬೋರ್ಡ್ ಪರೀೆಗಳನ್ನು ಹೇಗೆ ಎದುರಿಸುವುದು? ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳ ಅಧ್ಯಯನದ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಲವು ಪಾಲಕರು ತಮ್ಮ ಮಕ್ಕಳು ಉತ್ತಮ ಸಾಧನೆ ಮಾಡಿರುವುದರ ಕುರಿತು ಮಾತನಾಡಿ ಸಂಭ್ರಮ ವ್ಯಕ್ತಪಡಿಸಿದರು.
ಅಯ ಕಾರಜೋಳ ಸ್ವಾಗತಿಸಿದರು. ಲಕ್ಷ್ಮೀ ಭಾಗ್ಯ ನಿರೂಪಿಸಿದರು. ಪ್ರಾಚಾರ್ಯರಾದ ಸುಮೇಶ ಕುಮಾರ ಚೌದರಿ, ನವೀನ್ ಜಾರ್ಜ್, ಉಪ ಪ್ರಾಚಾರ್ಯ ನಿರ್ಮಲ ದೀವಟಿಗಿ ಮತ್ತಿತರರಿದ್ದರು.