ಸತತ ಪರಿಶ್ರಮವೇ ಸಾಧನೆಯ ಗುಟ್ಟು; ಡಾ.ಆರ್.ಎಂ. ಮಿರ್ದೆ

SEND UP
ವಿಜಯಪುರ ನಗರದ ಎಸ್.ಬಿ. ಆರ್ಟ್ಸ್ ಮತ್ತು ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ‘ರೈತನ ಮಗನು’ ಕೃತಿ ಬಿಡುಗಡೆಗೊಳಿಸಲಾಯಿತು. ಡಾ.ಶ್ರೀನಿವಾಸ ದೊಡಮನಿ, ಡಾ.ಆರ್.ಎಂ. ಮಿರ್ದೆ, ಪ್ರೊ.ಎ.ಬಿ. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಸತತ ಪರಿಶ್ರಮ, ನಿರ್ಧಿಷ್ಟ ಗುರಿ, ಛಲ, ಧೈರ್ಯದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಬಿಎಲ್ಡಿಇ ಸಂಸ್ಥೆಯ ಎಸ್.ಬಿ. ಆರ್ಟ್ಸ್ ಮತ್ತು ಕೆಸಿಪಿ ಸೈನ್ಸ್ ಕಾಲೇಜಿನ ಪ್ರಾಚಾರ್ಯೆ ಡಾ.ಆರ್.ಎಂ. ಮಿರ್ದೆ ಹೇಳಿದರು.

ಗುರುವಾರ ಕಾಲೇಜಿನಲ್ಲಿ ನಡೆದ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ರೈತನ ಮಗನು ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಸೀಮಿತರಾಗಬಾರದು. ವಿದ್ಯಾಭ್ಯಾಸದ ಜೊತೆ ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳಲು ಮುಂದಾಗಬೇಕು. ದಿನನಿತ್ಯ ಕಥೆ, ಕಾದಂಬರಿ, ಸಾಹಿತ್ಯ ಅಧ್ಯಯನ ಮಾಡಬೇಕು. ಪಠ್ಯದ ಹೊರತಾದ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಉತ್ತಮ ವ್ಯಕ್ತಿತ್ವ ರೂಪಸಿಕೊಳ್ಳಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೊಡ್ಡಮನಿ ಬಿ.ಎ. ಅಂತಿಮ ವರ್ಷದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಸಚಿನ ಚವ್ಹಾಣ ರಚಿಸಿರುವ ರೈತರ ಮಗನು ಕೃತಿ ಬಿಡುಗಡೆ ಮಾಡಿದರು. ಐಕ್ಯೂಎಸಿ ನಿರ್ದೆಶಕ ಡಾ.ಪಿ.ಎಸ್. ಪಾಟೀಲ ಮಾತನಾಡಿದರು.

ಉಪಪ್ರಾಚಾರ್ಯ ಪ್ರೊ.ಎ.ಬಿ. ಪಾಟೀಲ, ಡಾ. ಉಷಾದೇವಿ ಹಿರೇಮಠ, ಡಾ. ಎಸ್.ಕೆ. ಪಾಟೀಲ, ಪ್ರೊ. ಪ್ರಭಾವತಿ ತಳವಾರ, ಪ್ರೊ.ಐ.ಎಸ್. ಹೂಗಾರ, ಪ್ರೊ.ಅಮೀನ್ ಲೇನ್, ಡಾ. ತರನ್ನುಮ ಜಬೀನಖಾನ, ಡಾ. ಬಿ.ಆರ್. ಮಹೀಂದ್ರಕರ, ಜೆ.ಬಿ. ಬಿರಾದಾರ, ಅಕ್ಷಯ ಜನಾಯ, ಮಲಿಕ್ ಎಲ್. ಜಮಾದಾರ, ಜಿ.ಎಂ. ಗೇಂಡ್, ಕಿರಣಕುಮಾರ ಹರಿದಾಸ, ಭಾರತಿ ಕಾರಕಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net