ಸತತ ಪರಿಶ್ರಮದಿಂದ ಯಶಸ್ಸು

9Huk1-Web
ಬೆಲ್ಲದ ಬಾಗೇವಾಡಿಯಲ್ಲಿ ಯುಪಿಎಸ್‌ಸಿ ಸಾಧಕ ಪ್ರಫುಲ್ ದೇಸಾಯಿ ಅವರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸತ್ಕರಿಸಿದರು. ಕೆಂಪಣ್ಣ ದೇಸಾಯಿ, ಮಗೆಪ್ಪ ದೇಸಾಯಿ ಇದ್ದರು.
Published on

ಹುಕ್ಕೇರಿ: ಯಶಸ್ಸು ಸುಲಭವಾಗಿ ದೊರಕುವುದಿಲ್ಲ. ಸತತ ಪರಿಶ್ರಮದಿಂದ ಸಾಧಿಸಲು ಸಾಧ್ಯವೆಂಬುದಕ್ಕೆ ಯರನಾಳ ಗ್ರಾಮದ ಪ್ರಫುಲ್ ದೇಸಾಯಿ ಅವರು ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‌ಸಿ)ಯಲ್ಲಿ ಉತ್ತೀರ್ಣರಾಗಿರುವುದು ನಿದರ್ಶನ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

ತಾಲೂಕಿನ ಬೆಲ್ಲದ ಬಾಗೇವಾಡಿಯ ತಮ್ಮ ನಿವಾಸದಲ್ಲಿ ಭಾನುವಾರ ಪ್ರಫುಲ್ ದೇಸಾಯಿ ಅವರನ್ನು ಸತ್ಕರಿಸಿ ಮಾತನಾಡಿದ ಅವರು, ರೈತ ಕುಟುಂಬದಿಂದ ಬಂದ ಯುವಕ ಬಾಲ್ಯದಲ್ಲಿ ಕಂಡ ಕನಸು ನನಸು ಮಾಡಲು ಪಟ್ಟ ಪರಿಶ್ರಮ ಇತರರಿಗೂ ಮಾದರಿ ಎಂದರು. ಮುಂಬರುವ ದಿನಗಳಲ್ಲಿ ನಮ್ಮ ತಾಲೂಕಿನಲ್ಲಿ ಇಂತಹ ಪ್ರತಿಭೆಗಳು ಮತ್ತಷ್ಟು ಬೆಳಗಲಿ. ಅಂತಹ ಪ್ರತಿಭೆಗಳಿಗೆ ಪ್ರಫುಲ್ ದೇಸಾಯಿ ಐಕಾನ್ ಆಗಲಿ ಎಂದು ಹಾರೈಸಿದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಪ್ರಫುಲ್ ದೇಸಾಯಿ, ಬಾಲ್ಯದಿಂದ ನಮ್ಮ ತಂದೆಯವರು ಕತ್ತಿ ಸಹೋದರರ ಅಭಿಮಾನಿಗಳು. ಅದರಲ್ಲೂ ಕಿರಿಯ ವಯಸ್ಸಿನಲ್ಲಿ ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರೆಂದರೆ ನನಗೆ ಅಚ್ಚುಮೆಚ್ಚು. ಗುರು-ಹಿರಿಯರ ಮತ್ತು ತಾಲೂಕಿನ ಜನರ ಪ್ರೀತಿಯಿಂದ ಸಾಧನೆ ಸಾಧ್ಯವಾಗಿದೆ ಎಂದರು.

ಕೆಂಪಣ್ಣ ದೇಸಾಯಿ, ಮಗೆಪ್ಪ ದೇಸಾಯಿ, ಪಿಕಾರ್ಡ್ ಬ್ಯಾಂಕ್ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಜಿಪಂ ಸದಸ್ಯ ಅರ್ಜುನನಾಯ್ಕ ಪಾಟೀಲ, ಕೆಎಂಎಫ್ ಜಿಲ್ಲಾ ನಿರ್ದೇಶಕ ರಾಯಪ್ಪ ಡೂಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net