ಮಕ್ಕಳಲ್ಲಿ ಛಲದ ಗುಣ ಬಿತ್ತಬೇಕು

dj k halli puraskara
Published on

ಕೊಂಡ್ಲಹಳ್ಳಿ: ಮಕ್ಕಳಲ್ಲಿ ಸಾಧನೆ ಮಾಡಬೇಕೆಂಬ ಛಲದ ಗುಣ ಬೆಳೆಸಬೇಕು ಎಂದು ಪ್ರೌಢಶಿಕ್ಷಣ ಮಂಡಳಿಯ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ ಹೇಳಿದರು.

ಕೆ.ಟಿ.ಜಯಪ್ರಕಾಶ್ ಶಿಷ್ಯರ ಬಳಗ ಗ್ರಾಮದಲ್ಲಿ ಸೋಮವಾರ ಅಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮಕ್ಕಳು ಕಠಿಣ ಶ್ರಮ ಅಗತ್ಯ. ಆದ್ದರಿಂದ ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳನ್ನು ಈ ನಿಟ್ಟಿನಲ್ಲಿ ಮಾನಸಿಕವಾಗಿ ಸಿದ್ಧಗೊಳಿಸಬೇಕು ಎಂದರು.

ದೇವರ ಮೇಲೆ ನಂಬಿಕೆ ಇರಬೇಕು. ಆದರೆ, ಮೌಢ್ಯಾಚರಣೆ ನಮ್ಮ ಭವಿಷ್ಯಕ್ಕೆ ಕುತ್ತು ತರಲಿದೆ. ನಮ್ಮ ಶ್ರಮ ಇಲ್ಲದೆ ದೇವರ ಬಳಿ ಪೂಜಿಸಿದರೆ ಫಲ ದೊರೆಯದು.

ಆದ್ದರಿಂದ ಸತತ ಓದು, ಅಧ್ಯಯನದ ಮೂಲಕ ಸಾಧನೆ ಸಾಧ್ಯವೆಂಬ ಅರಿವು ಮಕ್ಕಳಲ್ಲಿ ಬಿತ್ತಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಉಪಾಧೀಕ್ಷಕ ಇ.ಶಾಂತವೀರ, ಪುರಸ್ಕಾರತರು ಕಿರಿಯರಿಗೆ ಸ್ಪೂರ್ತಿ, ಇತರರಿಗೆ ಮಾದರಿಯಾಗಬೇಕು ಎಂದರು.

ದೇವರೆಡ್ಡಿಹಳ್ಳಿ ಪ್ರೌಢಶಾಲೆ ಮುಖ್ಯಶಿಕ್ಷಕ ಇ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಪಿಡಬ್ಲ್ಯುಡಿ ಅಧೀಕ್ಷಕ ಅಭಿಯಂತರ ಕೆ.ಜಿ.ಜಗದೀಶ್,

ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ನಿವೃತ್ತ ಅಧಿಕಾರಿ ಡಿ.ಟಿ.ಜಗನ್ನಾಥ್, ಸಿ.ಚಂದ್ರಪ್ಪ, ಡಾ.ವಿಜಯ್ ನಾಗರಾಜ್, ಪ್ರಾಂಶುಪಾಲೆ ಸಿದ್ದಗಂಗಮ್ಮ,

ಯಶೋಧಮ್ಮ, ಬಿ.ರುದ್ರಮುನಿ, ಡಿ.ದಯಾನಂದ, ಕೆ.ಎಚ್.ಸಣ್ಣಯಲ್ಲಪ್ಪ, ಎಂ.ಹನುಮಂತಪ್ಪ, ಟಿ.ಎಸ್.ಬಸಣ್ಣ, ಎಸ್.ಕೆ.ನಿಂಗರಾಜ್, ಡಿ.ಈಶ್ವರಪ್ಪ,

ಎಸ್.ಎಚ್.ತಿಪ್ಪೇಸ್ವಾಮಿ, ಕೆ.ರೇವಣ್ಣ, ಕೆ.ಟಿ.ತಿಪ್ಪೆಶ್, ಡಿ.ಪ್ರಕಾಶ್, ಬಿ.ಶ್ರೀನಿವಾಸ್, ಟಿ.ಹುಲಿಕುಂಟೆಪ್ಪ, ಸಿ.ಎಂ.ದೇವೇಂದ್ರಪ್ಪ ಇದ್ದರು.

ಪಾಲಕರು ಕೂಲಿ ಸೇರಿ ವಿವಿಧ ಶ್ರಮದ ಮೂಲಕ ಗಳಿಸಿದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವೆಚ್ಚ ಮಾಡುತ್ತಾರೆ. ಈ ಅರಿವು ಇರಬೇಕು. ಶತತ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ತಲುಪಿ ಗುರು-ಹಿರಿಯರು-ಪಾಲಕರಿಗೆ ಗೌರವ ತರಬೇಕು.ಮಲ್ಲಿಕಾರ್ಜುನ್, ನಿವೃತ್ತ ಅಧಿಕಾರಿ, ವಿಶೇಷ ಭೂಸ್ವಾಧೀನ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net