ತಿಂಗಳಲ್ಲಿ ಪ್ರವಾಸೋದ್ಯಮಿಗಳಿಗೆ ಪರ್ಮೀಷನ್‌-ಸಚಿವ ವೈದ್ಯ ಭರವಸೆ

Tourism-Day-inauguration
Published on

ಕಾರವಾರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೂಡಿಕೆ ಮಾಡುವವರಿಗೆ 30 ದಿನದಲ್ಲಿ ಎಲ್ಲ ಅನುಮತಿ ಕೊಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪ್ರವಾಸೋದ್ಯಮ ಇಲಾಖೆಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮಕ್ಕೆ ಅತಿ ಹೆಚ್ಚು ಅವಕಾಶವಿದೆ. ಕರಾವಳಿಯಲ್ಲಿ ಕಡಲ ತೀರ ಘಟ್ಟದ ಮೇಲೆ ಕಾಡಿನ ಸಂಪತ್ತಿದೆ. ಜಿಲ್ಲೆಯಲ್ಲಿ ಬೇರೆಲ್ಲ ಕ್ಷೇತ್ರಗಳಿಗಿಂತ ಉದ್ಯೋಗ ಕೊಡುವುದು ಪ್ರವಾಸೋದ್ಯಮ. ಜಿಲ್ಲೆಯ ಯುವ ಜನತೆ ಅತ್ತ ಕಡೆ ಗಮನ ಹರಿಸಬೇಕು ಎಂದರು. ಪೂರಕ ಸಹಾಯ, ಸಹಕಾರ ಮಾಡಲು ಸಿದ್ದರಿದ್ದೇವೆ. ಪ್ರವಾಸೋದ್ಯಮ ಬೆಳೆಸಿ, ನೀವೂ ಬೆಳೆಯಿರಿ ಎಂದರು ಪ್ರವಾಸೋದ್ಯಮಿಗಳು ಸ್ಥಳೀಯರು ಸಿದ್ದಪಡಿಸಿದ ಉತ್ಪನ್ನ ಪ್ರಚಾರ ಮಾಡಿ ಎಂದು ಕರೆ ನೀಡಿದರು.
ಪ್ರವಾಸೋದ್ಯಮಿ ನರಸಿಂಹ ಛಾಪಕಂಡ ಉಪನ್ಯಾಸ ನೀಡಿ, ಪ್ರವಾಸೋದ್ಯಮ ಎಂದರೆ ಕೇವಲ ಹಣ ಮಾಡುವುದಲ್ಲ. ನಮ್ಮ ಸಂಸ್ಕೃತಿ, ಕಲೆ, ಜನಜೀವನವನ್ನು ತೋರಿಸುವುದಾಗಿದೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ನಡೆಸಿಕೊಂಡು ಹೋಗಬೇಕಿದೆ ಎಂದರು.
ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸಿದ್ದರು.ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಬೇಬಿ ಮೊಘೇರ ಸ್ವಾಗತಿಸಿದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ,ಮಾವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇಘನಾ ನಾಯ್ಕ, ನಯನಾ ನಾಯ್ಕ, ಸಚಿವರ ಪತ್ನಿ ಪುಷ್ಪಲತಾ ವೈದ್ಯ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net