

ಹೆಬ್ರಿ: ಚಾರ ನವೋದಯದ ಬಳಿ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಲ್ಲಿ ನೀರು ಹರಿದು ಕುಡಿಬೈಲ್, ಸಳ್ಳೆಕಟ್ಟೆ ಭಾಗದ ಏಳು ಸಾವಿರ ಅಡಕೆ ಮರ, 100 ತೆಂಗು ಹಾಗೂ ಬಾಳೆ ಮುಳುಗಡೆಯಾದ ಪ್ರದೇಶಕ್ಕೆ ಶಾಶ್ವತ ಕಾಮಗಾರಿಯಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.
ತಡೆಗೋಡೆ ನಿರ್ಮಾಣ, 350 ಮೀಟರ್ ಪೈಪ್‌ಲೈನ್, ಪುಶಿಂಗ್ ವಿಧಾನ ಬಳಸಿ ಸೋರಿಕೆಯಾಗುವ ನೀರನ್ನು ಹೊರ ಹಾಕುವ ಕಾಮಗಾರಿ ನಡೆದಿದೆ. ಇದರಿಂದಾಗಿ ಮುಳುಗಡೆಯಾಗುವ ಕೃಷಿ ಭೂಮಿಗೆ ಮುಕ್ತಿ ಸಿಗಲಿದೆ. ಈ ಬಗ್ಗೆ ವಿಜಯವಾಣಿ ಆಗಾಗ ವರದಿ ಪ್ರಕಟಿಸಿ, ಅಧಿಕಾರಿಗಳು ಗಮನ ಸೆಳೆದಿತ್ತು.
ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಶಾಶ್ವತ ಯೋಜನೆ ರೂಪಿಸುವತ್ತ ಕಾಮಗಾರಿ ನಡೆದಿದೆ. ಮತ್ತೆ ನೀರು ನಿಲ್ಲಲು ಗೇಟ್‌ಗಳ ಅಳವಡಿಕೆ ನಡೆದಿದೆ. ನೀರಿನ ಹರಿವು ನದಿಯಲ್ಲಿ ಕಡಿಮೆ ಇರುವುದರಿಂದ 5 ಮೀಟರ್ ನೀರು ನಿಲ್ಲುವುದು ಕಷ್ಟ. -ಅರುಣ್ ಭಂಡಾರಿ, ಎಇಇ, ಸಣ್ಣ ನೀರಾವರಿ ಇಲಾಖೆ ಉಡುಪಿ https://www.vijayavani.net/electricity-pole-in-the-middle-of-the-road https://www.vijayavani.net/demand-for-extension-of-madgaon-mangalore-train-to-mumbai