ನೀಲೆಕಣಿ ರಸ್ತೆ ಹೊಂಡಗಳಿಗೆ ದೊರೆಯದ ಶಾಶ್ವತ ಪರಿಹಾರ

20sirsi2
Published on

ಶಿರಸಿ: ಟ್ರೋಲ್​ಗೆ ಗುರಿಯಾಗಿದ್ದ ನಗರದ ನೀಲೇಕಣಿ ರಸ್ತೆ ಹೊಂಡದ ಸಮಸ್ಯೆ ಮತ್ತೆ ತಲೆದೋರಿದೆ. ಕಳೆದ ನಾಲ್ಕು ದಿನಗಳ ಅಬ್ಬರದ ಮಳೆಗೆ ರಸ್ತೆ ತುಂಬೆಲ್ಲ ಬೃಹತ್ ಹೊಂಡಗಳು ತಲೆ ಎತ್ತಿದ್ದು, ಪ್ರಯಾಣಿಕರು ಮತ್ತೆ ಹೈರಾಣಾಗುತ್ತಿದ್ದಾರೆ.

ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ 766ಎ ಯ ನಗರ ಪ್ರದೇಶವಾದ ನೀಲೇಕಣಿಯಲ್ಲಿ ಜಾಗ ನೀಡಿದವರಿಗೆ ಪರಿಹಾರ ನೀಡುವಿಕೆ ಬಾಕಿ ಇದ್ದ ಕಾರಣ ರಸ್ತೆ ನಿರ್ವಣದ ಗುತ್ತಿಗೆ ವಹಿಸಿಕೊಂಡ ಆರ್​ಎನ್​ಎಸ್ ಸಂಸ್ಥೆ ಇಲ್ಲಿ ರಸ್ತೆ ಕಾಮಗಾರಿ ನಡೆಸಲು ವಿಳಂಬ ಮಾಡಿತ್ತು. ಅಲ್ಲದೆ, ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ನಿರ್ವಿುಸುವ ಸಲುವಾಗಿ ಈ ಮಾರ್ಗದಲ್ಲಿ ಜಿಲ್ಲಾಡಳಿತ ವಾಹನ ಸಂಚಾರವನ್ನೂ ಸ್ಥಗಿತಗೊಳಿಸಿದ್ದರ ಹಿನ್ನೆಲೆಯಲ್ಲಿ ಆರ್ ಎನ್ ಎಸ್ ಕಂಪನಿ ಕಳೆದ ಬೇಸಿಗೆಯಲ್ಲಿ ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ನಿರ್ವಿುಸುವ ಬಗ್ಗೆ ಗಮನ ಹರಿಸಿತ್ತು. ಆದರೆ, ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನೀಲೇಕಣಿಯಿಂದ ಅಗಸೇಬಾಗಿಲು ಮೀನು ಮಾರುಕಟ್ಟೆಯವರೆಗೆ ಬೃಹತ್ ಹೊಂಡಗಳು ನಿರ್ವಣವಾಗಿದ್ದವು. ಸಾರ್ವಜನಿಕರ ಪ್ರತಿಭಟನೆ ಜತೆ ಇಲ್ಲಿಯ ಹೊಂಡಗಳ ವಿಡಿಯೋಗಳೂ ಸಹ ವೈರಲ್ ಆಗಿದ್ದವು. <

ಆ ಬಳಿಕ ಎಚ್ಚೆತ್ತುಕೊಂಡಿದ್ದ ಆರ್ ಎನ್ ಎಸ್ ಕಂಪನಿ ಮಳೆಗಾಲದಲ್ಲಿ ರಸ್ತೆ ನಿರ್ವಿುಸಲು ಸಾಧ್ಯವಿಲ್ಲದ ಕಾರಣ ಹೊಂಡಗಳನ್ನು ತುಂಬಿತ್ತು. ಪದೇ ಪದೆ ಹೊಂಡ ಬಿದ್ದರೂ ಪ್ರತಿ ಮೂರು ದಿನಕ್ಕೊಮ್ಮೆ ಇಲ್ಲಿಯ ಹೊಂಡ ತುಂಬಿ ಮತ್ತೆ ವಿಡಿಯೋಗಳು ವೈರಲ್ ಆಗದಂತೆ ನೋಡಿಕೊಂಡಿತ್ತು. ಆದರೆ, ಕಳೆದ ನಾಲ್ಕು ದಿನಗಳ ಮಳೆಗೆ ಈ ಹೊಂಡಗಳೆಲ್ಲ ಮತ್ತೆ ತಲೆ ಎತ್ತಿವೆ. ಹಾಕಲಾಗಿದ್ದ ವೆಟ್ ಮಿಕ್ಸ್, ಜೆಲ್ಲಿ ಕಲ್ಲುಗಳೆಲ್ಲ ಕಿತ್ತು ಹೋಗಿವೆ. ತಕ್ಷಣ ಈ ಹೊಂಡ ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net