

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಪ್ರಭಾತ್ ಕಾಲನಿಯಲ್ಲಿ ಸಾಲ್ಮಾರ ಆಯುರ್ಧಾಮದ ನೂತನ ಶಾಖೆಯನ್ನು ಸೋಮವಾರ ಆರಂಭಿಸಲಾಯಿತು.
ಆಯುರ್ಧಾಮದ ಮುಖ್ಯಸ್ಥ ಶಂಶುದ್ದೀನ್ ಸಾಲ್ಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಮೂಲವ್ಯಾಧಿ ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಜನರ ಜೀವನ ಶೈಲಿ ಬದಲಾವಣೆಯೇ ಕಾರಣ. ಈ ದಿಸೆಯಲ್ಲಿ ಮೂಲವ್ಯಾಧಿಗೆ ಶಾಶ್ವತ ಪರಿಹಾರವನ್ನು ಸಾಲ್ಮಾರ ಪೈಲೋ ಕೇರ್ ಪಾರಂಪರಿಕ ದಿವ್ಯ ಔಷಧದಿಂದ ಗುಣಪಡಿಸಲಾಗುತ್ತಿದೆ ಎಂದರು.
ಹಿರಿಯರಿಂದ ಬಳುವಳಿಯಾಗಿ ಬಂದಂತಹ ವಿದ್ಯೆಯನ್ನು ಪಡೆದು ಜನರನ್ನು ಮೂಲವ್ಯಾಧಿಯಿಂದ ಗುಣಮುಖಪಡಿಸುವ ಉದ್ದೇಶ ಹೊಂದಿದ್ದೇವೆ. ಸರ್ಕಾರದ ನಿಯಮಾವಳಿ ಪ್ರಕಾರ ಆಯುರ್ಧಾಮ ಸ್ಥಾಪಿಸಿದ್ದೇವೆ ಎಂದು ತಿಳಿಸಿದರು.
ಮೊದಲು ಮಹಾರಾಷ್ಟ್ರದಲ್ಲಿ ಆರಂಭವಾದ ಕ್ಲಿನಿಕ್, ಬಳಿಕ ಪುತ್ತೂರಿನ ಪಂಜಳ, ಬೆಂಗಳೂರಿನ ರಾಜಾಜಿನಗರದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇದೀಗ ಹುಬ್ಬಳ್ಳಿ ನಗರದ ಜನತೆಗೆ ಸೇವೆ ನೀಡಬೇಕೆಂಬ ಉದ್ದೇಶದಿಂದ ಮೂರನೇ ಶಾಖೆಯನ್ನು ಹುಬ್ಬಳ್ಳಿ ವಿದ್ಯಾನಗರದ ಶಿರೂರ ಪಾರ್ಕ್ ರಸ್ತೆಯಲ್ಲಿ ತೆರೆಯಲಾಗಿದೆ ಎಂದರು.
ಈ ಸಾಲ್ಮಾರ ಆಯುರ್ವೇದ ಕ್ಲಿನಿಕ್‌ನಲ್ಲಿ ಬಿಎಎಂಎಸ್ ಅಧ್ಯಯನ ಮಾಡಿದ ನುರಿತ ವೈದ್ಯರು, ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಪೈಲ್ಸ್, ಪಿಸ್ತೂಲ, ಫಿಷರ್, ವಿತರೀತ ನೋವು, ತುರಿಕೆ, ನವೆ, ಮಲ ವಿಸರ್ಜನೆಗೆ ಅಡೆತಡೆ, ಭಗಂದರ ಕಾಯಿಲೆಗೆ ಕೇವಲ ಮೂರು ದಿನಗಳಲ್ಲಿ ಚಿಕಿತ್ಸೆ ನೀಡಿ ಹತೋಟಿಗೆ ತರಲಾಗುವುದು. ಮುಂದಿನ 30-60 ದಿನಗಳಲ್ಲಿ ಸಂಪೂರ್ಣ ಕೋರ್ಸ್ ಮೂಲಕ ಮೂಲವ್ಯಾದಿ ರೋಗಕ್ಕೆ ಆಪರೇಷನ್ ಅಥವಾ ಲೇಸರ್ ರಹಿತ ಚಿಕಿತ್ಸೆಯಿಂದ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದರು. ಆಯುರ್ಧಾಮ ಆರಂಭ ನಿಮಿತ್ತ ಮೂರು ದಿನಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ನುಸ್ರತ್ ಸಾಲ್ಮಾರ, ಸಾಹೇಲ್ ಸಾಲ್ಮಾರ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.